ವಿಜಯಪುರ: ವಿಜಯಪುರದ ಭೀಮಾತೀರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರೇಯಸಿಯ ಕಣ್ಣೆದುರೇ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Advertisement
ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರೇಯಸಿಯ ಕಣ್ಣೆದುರೇ 32 ವರ್ಷದ ಪ್ರಿಯಕರ ರವಿ ನಿಂಬರಗಿಯನ್ನು ಭೀಕರವಾಗಿ ಹತ್ಯೆಗೈದು ಶವವನ್ನೂ ಬಿಡದೇ ದುರುಳರು ಕೊಂಡೊಯ್ದಿದ್ದಾರೆ.
Advertisement
Advertisement
ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿ ಅಮೀನಾ ಬೇಗಂನ್ನು ಪ್ರೀತಿಸುತ್ತಿದ್ದ ರವಿಯನ್ನು ಹತ್ಯೆಗೈಯಲು ಹುಡುಗಿ ಮನೆಯವರು ಪ್ಲಾನ್ ಮಾಡಿದರು. ರವಿ ಬಳಗಾನೂರನಿಂದ ಸಂತೆ ಮಾಡಿಕೊಂಡು ಬರುವ ವೇಳೆ ಬರೋಬ್ಬರಿ ೮ ಮಂದಿ ಪ್ರಹಾರ ಮಾಡಿ ಕೊಲೆಗೈದು ಶವವನ್ನು ಬಿಡದೇ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ
Advertisement
ಇನ್ನೂ ವಿಷಯ ತಿಳಿಯುತ್ತಿದಂತೆ ಯುವಕನ ಮನೆಗೆ ಓಡೋಡಿ ಬಂದು ಯುವತಿ ವಿಷಯ ಮುಟ್ಟಿಸಿದ್ದಾರೆ. ಇದೀಗ ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.