ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಮಗಳ ಹತ್ಯೆ?

Public TV
1 Min Read
KILL

ಮೈಸೂರು: ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಶಂಕೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿಸಿದ ತಪ್ಪಿಗೆ ಮಗಳನ್ನೇ ತಂದೆಯೇ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಾಗಿದೆ.

ನಂಜನಗೂಡು ತಾಲೂಕಿನ ಪಾರ್ವತಿಪುರದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಪ್ರಿಯಕರ ಈ ಬಗ್ಗೆ ಕೃಷ್ಣ ಎಚ್.ಡಿ. ಕೋಟೆಯ ಸರಗೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

HONOR KILLING

19 ವರ್ಷದ ಶೋಭಾ ಮತ್ತು ಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಓಡಿ ಹೋಗಲು ಯತ್ನಿಸಿದಾಗ ಶೋಭಾ ತಂದೆ ಗುರುಸಿದ್ದೇಗೌಡ ಮತ್ತು ನಾಲ್ವರು ಹಲ್ಲೆ ನಡೆಸಿದ್ರು. ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಓಡಿ ಹೋಗಿದ್ದಾರೆ.

ಸ್ಥಳದಲ್ಲಿದ್ದ ಶೋಭಾ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದಾಗಿ ಆಕೆ ಮೃತಪಟ್ಟಿದ್ದಾಳೆಂದು ಆರೋಪಿಸಿ ಪ್ರಿಯಕರ ದೂರು ದಾಖಲಿಸಿದ್ದಾರೆ. ಕಳೆದ 3 ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದು, ಈವರೆಗೂ ಪ್ರಕರಣ ಸಂಬಂಧ ಪೊಲೀಸರು ಕ್ರಮಕೈಗೊಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *