Connect with us

Latest

ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

Published

on

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಹುವಾವೆ ಕಂಪೆನಿ 6ಜಿಬಿ ರಾಮ್, 4000 ಎಂಎಎಚ್ ಬ್ಯಾಟರಿಯುಳ್ಳ ಫೋನ್ ಬಿಡುಗಡೆ ಮಾಡಿದೆ.

ಈ ಫೋನಿಗೆ ಹೋನರ್ ಪ್ರೋ 8 ಎಂದು ಹೆಸರನ್ನು ಇಟ್ಟಿದ್ದು, ಬೆಲೆಯನ್ನು ತಿಳಿಸಿಲ್ಲ. ಈಗಾಗಲೇ ಯುರೋಪ್‍ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, 549 ಯುರೋ(ಅಂದಾಜು 39,500 ರೂ.) ದರವಿದೆ.

ನಿಲಿ ಮತ್ತು ಕಪ್ಪು ಬಣ್ಣದಲ್ಲಿ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಿಂದುಗಡೆ 12 ಎಂಪಿ ಎರಡು ಡ್ಯುಯಲ್ ಕ್ಯಾಮೆರಾವಿದೆ.

ಗುಣವೈಶಿಷ್ಟ್ಯಗಳು:
ದೇಹ ಮತ್ತು ಡಿಸ್ಪ್ಲೇ:
157*77.5*7 ಎಂಎಂ ಗಾತ್ರ, 184 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್ (ಎರಡು ನ್ಯಾನೋ ಸಿಮ್ ಅಥವಾ 1 ಸಿಮ್ ಮತ್ತು ಮೆಮೊರಿ ಕಾರ್ಡ್), 5.7 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1440*2560 ಪಿಕ್ಸೆಲ್, ~ 73.6% ಬಾಡಿ ಮತ್ತು ಸ್ಕ್ರೀನ್ ಅನುಪಾತ, 515 ಪಿಕ್ಸೆಲ್) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಹೊಂದಿದೆ.

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 7.0 ನೂಗಟ್ ಓಎಸ್, ಹೈಸಿಲಿಕಾನ್ ಕಿರಿನ್ 960 ಅಕ್ಟಾಕೋರ್ ಪ್ರೊಸೆಸರ್( (4×2.4 GHz Cortex-A73 & 4×1.8 GHz Cortex-A53), ಮಾಲಿ – ಜಿ71 ಎಂಪಿ8 ಗ್ರಾಫಿಕ್ಸ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ, 6 ಜಿಬಿ ರಾಮ್, ಎರಡನೇ ಸಿಮ್ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.

 

ಕ್ಯಾಮೆರಾ:
ಹಿಂದುಗಡೆ 12 ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ, ಮುಂದುಗಡೆ 8 ಎಂಪಿ ಹೊಂದಿರುವ ಕ್ಯಾಮೆರಾವಿದೆ.

ಇತರೇ:
ಲಿಪೋ 4000 ಎಂಎಎಚ್ ಬ್ಯಾಟರಿ, ಫಾಟ್ ಬ್ಯಾಟರಿ ಚಾರ್ಜಿಂಗ್, ಫಿಂಗರ್ ಪ್ರಿಂಟ್ ಸೆನ್ಸರ್, ಯುಎಸ್‍ಬಿ 2.0

 

 

Click to comment

Leave a Reply

Your email address will not be published. Required fields are marked *