– ಜನರಲ್, ಐಸಿಯು ವಾರ್ಡ್ ಜಲಾವೃತ
ದಾವಣಗೆರೆ: ಹೊನ್ನಾಳಿಯಲ್ಲಿ (Honnalli) ರಾತ್ರಿ ಭಾರೀ ಮಳೆಯಾಗಿದ್ದು (Rain) ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಗೆ (Taluk Hospital) ನೀರು ನುಗ್ಗಿದೆ. ಆಸ್ಪತ್ರೆಯ ಒಳಗೆ ಮಳೆ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದ್ದಾರೆ.
ಜನರಲ್ ವಾರ್ಡ್, ಐಸಿಯು ವಾರ್ಡ್‌ಗಳಿಗೂ ನೀರು ನುಗ್ಗಿದ್ದು ಇಡೀ ಆಸ್ಪತ್ರೆ ಸಂಪೂರ್ಣ ಜಲಾವೃತವಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್‌ಗೆ ನೀರು ನುಗ್ಗಿದ್ದು ವಾರ್ಡ್‌ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.
ಸರಿಯಾದ ರೀತಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕ್ರೀಡಾಂಗಣದಿಂದ ಆಸ್ಪತ್ರೆಗೆ ನೀರು ಹರಿದಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಆಸ್ಪತ್ರೆಯನ್ನು ಸಿಬ್ಬಂದಿ ಕ್ಲೀನ್ ಮಾಡಿದ್ದಾರೆ. ಇದನ್ನೂ ಓದಿ: ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ
ಹೊನ್ನಾಳಿ ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡು ಬಡಾವಣೆಯ ಬೀದಿಗಳಲ್ಲೂ ಮೊಣಕಾಲುದ್ದ ನೀರು ನಿಂತಿದೆ . ಖಾಸಗಿ ಬಸ್ ನಿಲ್ದಾಣದಲ್ಲೂ ಎರಡು ಅಡಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ನಿಂತ ನೀರಿನಲ್ಲೇ ಬೈಕ್ ಸವಾರರು ಹಾಗೂ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.