Bengaluru CityKarnatakaLatestMain Post

ಕಬ್ಬನ್ ಪಾರ್ಕ್‍ನಲ್ಲಿ ಇನ್ಮುಂದೆ ಹೊಸ ರೂಲ್ಸ್ – ವಾಹನ ಸವಾರರು ಹಾರ್ನ್ ಹೊಡೆದರೆ ದಂಡ

ಬೆಂಗಳೂರು: ನಗರದಲ್ಲಿರುವ ಕಬ್ಬನ್ ಪಾರ್ಕ್ (Cubbon Park) ಒಳಭಾಗದಲ್ಲಿ ವಾಹನ ಸಂಚಾರ ಮಾಡುವವರು ಇನ್ನು ಮುಂದೆ ಎಚ್ಚರಿಕೆ ವಹಿಸಲೇಬೇಕು. ಕಾರಣ ಕಬ್ಬನ್ ಪಾರ್ಕ್‍ನಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಹೊಸ ರೂಲ್ಸ್ ಒಂದು ಜಾರಿಯಾಗಿದ್ದು, ನೀವು ಅಪ್ಪಿ, ತಪ್ಪಿ ಈ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಗೆ (Police) ಸಿಕ್ಕಿಹಾಕಿಕೊಂಡರೆ ದಂಡ ಕಟ್ಟಬೇಕಾಗಿದೆ.

ಇನ್ಮುಂದೆ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನ ಓಡಿಸುವಾಗ ಹಾರ್ನ್ (Horn) ಮಾಡುವಂತಿಲ್ಲ. ಕಾರಣ ರಾಜಧಾನಿ ಬೆಂಗಳೂರಿನ (Bengaluru) ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ನೋಡಲೆಂದೇ ಲಕ್ಷಾಂತರ ಮಂದಿ ಬಂದು ಹೋಗ್ತಾರೆ. ಇದರ ನಡುವೆ ಬೆಂಗಳೂರು ಮಂದಿ ಕೂಡ ಇದರ ನಡುವೆ ಓಡಾಟ ಮಾಡ್ತಾರೆ. ಈ ವೇಳೆ ವಾಹನಗಳು ಉಂಟು ಮಾಡುವ ಹಾರ್ನ್‍ನಿಂದಾಗಿ ಬರುವ ಜನರಿಗೆ ತೊಂದರೆ ಉಂಟುಮಾಡಿದೆ. ಕಬ್ಬನ್ ಪಾರ್ಕ್ ಒಳ ಭಾಗದಲ್ಲಿ ಶಬ್ಧ ಉಂಟು ಮಾಡಿ ಸಾರ್ವಜನಿಕರಿಗೆ ಹಾಗೂ ಪಕ್ಷಿ, ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರ ಸಂಚಾರಿ ಪೊಲೀಸರ ಜೊತೆ ಸಭೆ ನಡೆಸಿ ತೋಟಗಾರಿಕೆ ಇಲಾಖೆ (Horticulture Department) ಹೊಸದೊಂದು ಆದೇಶ ಹೊರಡಿಸಿದೆ. ವಾಹನಗಳು ಕಬ್ಬನ್ ಪಾರ್ಕ್ ಬಳಿ ಹಾರ್ನ್ ಹೊಡೆದರೆ ದಂಡ ಪ್ರಯೋಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ಪೇಟದಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ

ಈ ಸಂಬಂಧ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ಒಟ್ಟು 16 ಕಡೆ ನಿಶ್ಯಬ್ಧ ವಲಯ ಅನ್ನೋ ಎಚ್ಚರಿಕೆ ನಾಮಫಲಕ ಕೂಡ ಹಾಕಲಾಗಿದೆ. ಈ ವಿಚಾರ ಸಂಬಂಧ ಸವಾರರ ಅರಿವಿಗೆ ತರುವ ನಿಟ್ಟಿನಲ್ಲಿ ಓಡಾಟ ಮಾಡುವವರಿಗೆ ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಬಳಿಕ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಲಿದ್ದಾರೆ. ಇನ್ನೂ ನಿಯಮ ಉಲ್ಲಂಘನೆ ಮಾಡುವವರಿಗೆ ಟ್ರಾಫಿಕ್ ಪೊಲೀಸರೇ ದಂಡ ಹಾಕಲಿದ್ದು, ತಿಂಗಳ ಬಳಿಕ ರೂಲ್ಸ್ ಜಾರಿಗೆ ಬರಲಿದೆ. ಇದನ್ನೂ ಓದಿ: ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

Live Tv

Leave a Reply

Your email address will not be published. Required fields are marked *

Back to top button