– ಪ್ರಜ್ವಲ್, ರೇವಣ್ಣ ಸೇರಿ 48 ಮುಖಂಡರ ಪೆನ್‌ಡ್ರೈವ್ ಮಾಡಿದ್ದಾರೆ ಎಂದ ಸಚಿವ
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಪ್ರಜ್ವಲ್ ರೇವಣ್ಣ ಸೇರಿ 48 ಮುಖಂಡರ ವಿರುದ್ಧ ಪೆನ್‌ಡ್ರೈವ್ ತಯಾರು ಮಾಡಲಾಗಿದೆ. ಇದರಲ್ಲಿ ಬೇರೆ ರಾಜ್ಯದ ಸಚಿವರು, ಜಡ್ಜ್‌ಗಳು ಇದ್ದಾರೆ. ಇಂತಹ ಬ್ಲ್ಯಾಕ್‌ಮೇಲ್ ಸಂಪೂರ್ಣ ಅಂತ್ಯವಾಗಬೇಕು. ಅದಕ್ಕಾಗಿ ಈ ಪ್ರಕರಣ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಸಚಿವ ಕೆ.ಎನ್ ರಾಜಣ್ಣ (KN Rajanna) ಆಗ್ರಹಿಸಿದರು.
ವಿಧಾನಸೌಧದಲ್ಲಿ (Vidhana Soudha) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯತ್ನಾಳ್ ಅವರು ನನ್ನ ಹೆಸರು ನಿರ್ಧಿಷ್ಟವಾಗಿ ತೆಗೆದುಕೊಂಡರು, ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಹಾಸನದ ರೇವಣ್ಣ ಇರಬಹುದು, ಪ್ರಜ್ವಲ್ ರೇವಣ್ಣ ಇರಬಹುದು. ಹಾಗೇ ಮಾಜಿ ಶಾಸಕರ ಪೆನ್ ಡ್ರೈವ್ ಸೇರಿದಂತೆ ಅಶ್ಲೀಲ ಪೆನ್‌ಡ್ರೈವ್‌ಗಳನ್ನ ತಯಾರು ಮಾಡಿದ್ದಾರೆ. ಈ ಬ್ಲಾಕ್ ಮೇಲ್ ಸಂಪೂರ್ಣವಾಗಿ ಅಂತ್ಯವಾಗಬೇಕು. ಹಾಗಾಗಿ ತನಿಖೆ ಸ್ವರೂಪದ ಬಗ್ಗೆ ಗೃಹ ಸಚಿವರ ಜೊತೆಗೆ ಮಾತಾಡುತ್ತೇನೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಇದು ಆಗಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಪೆನ್ ಡ್ರೈವ್, ಮನುಷ್ಯರ ತೇಜೊವಧೆ ಮಾಡೋದು ನಡೆದಿದೆ. ರಮೇಶ್ ಜಾರಕಿಹೊಳಿ, ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಗಳ ಬಗ್ಗೆ ತಡೆಯಾಜ್ಞೆ ತಂದಿದ್ದಾರೆ. ಇದೆಲ್ಲಾ ಸೆರಿದ್ರೆ 48 ಜನರ ಪೆನ್‌ಡ್ರೈವ್ ತಯಾರು ಮಾಡಿದ್ದಾರೆ. ಎಸ್‌ಐಟಿ ಎಲ್ಲಾ ಮಾಮುಲಾಗಿದೆ, ಈ ರೀತಿ ಬ್ಲ್ಯಾಕ್‌ಮೇಲ್ ಸಂಸ್ಕೃತಿ ಅಂತ್ಯವಾಗಬೇಕಾದ್ರೆ ಉನ್ನತಮಟ್ಟದ ತನಿಖೆಯಾಗಿ ಅಪಾದಿತರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ನಾಳೆ ಸಿಎಂಗೆ ದೂರು:
ಹನಿಟ್ರ್ಯಾಪ್ ಪ್ರಯತ್ನ ನಡೆದಿರೋದು ನಿಜ. ಹೇಳಿಕೊಳ್ಳೋಕೆ ನಾಚಿಕೆ ಏನಿಲ್ಲ. ನಾನೇನು ಶ್ರೀರಾಮಚಂದ್ರನೂ ಅಲ್ಲ, ಸಿಎಂ ಭೇಟಿ ಮಾಡಿ ನಾಲೆ ದೂರು ಕೊಡುತ್ತೇ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.