ಬೆಂಗಳೂರು: ಪಾಕಿಸ್ತಾನದ ಗೂಢಾಚಾರಿಯಾಗಿ ಕೆಲಸ ಮಾಡಿ ಬಂಧನಕ್ಕೆ ಒಳಗಾದ ವ್ಯಕ್ತಿ ಐಎಸ್‍ಐ ಬೀಸಿದ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ರಾಜಸ್ಥಾನ ಮೂಲದ ಜೀತೇಂದ್ರ ಸಿಂಗ್ ಭಾರತೀಯ ಸೇನೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಈತ ರವಾನಿಸುತ್ತಿದ್ದ. ಭಾರತೀಯ ಸೇನೆಯ ಯೂನಿಫಾರ್ಮ್ ಹಾಕಿಕೊಂಡು ತಾನೂ ಕಮಾಂಡೋ ಎಂಬಂತೆ ಪೋಸ್ ಕೊಡುತ್ತಿದ್ದ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ
Advertisement
Advertisement
ಗಡಿಯಲ್ಲಿ ಸಾರ್ವಜನಿರು, ಸೇನೆಯ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಲು ಐಎಸ್‍ಐ ಬಲೆ ಬೀಸುತ್ತದೆ. ಸೈನಿಕರಿಗೆ, ಅಧಿಕಾರಿಗಳಿಗೆ ಹಣದ ಆಸೆ ತೋರಿಸಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸುತ್ತದೆ. ಜಿತೇಂದರ್ ಸಿಂಗ್‍ನನ್ನು ಕೂಡ ಹೆಣ್ಣು ಮತ್ತು ಹಣ ತೋರಿಸಿ ಟ್ರ್ಯಾಪ್ ಮಾಡಲಾಗಿತ್ತು. ಇದನ್ನೂ ಓದಿ: ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್
Advertisement
Advertisement
ಐಎಸ್‍ಐ ಏಜೆಂಟ್ ಯುವತಿ ಜಿತೇಂದರ್ ಸಿಂಗ್ ಫೇಸ್‍ಬುಕ್‍ನಲ್ಲಿ ಫ್ರೆಂಡ್ ಆಗಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಳು.ಭಾರತೀಯ ಸೇನೆಯ ಬಗ್ಗೆ ವಾಟ್ಸಪ್ ಮೂಲಕ ಈತ ಮಾಹಿತಿ ನೀಡುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕಾಟನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಸೇನಾಧಿರಿಸು ಧರಿಸಿ ವಂಚನೆಗೆ ಇಳಿದಿದ್ದು, ಇಂದು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.