ವಿಜಯಪುರ: ಹನಿಟ್ರ‍್ಯಾಪ್ (Honey Trap) ಎನ್ನುವಂತದ್ದು ಬಹಳ ಹೀನಾಯವಾದ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಿಜಯಪುರದಲ್ಲಿ (Vijayapura) ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ (KN Rajanna) ಅವರ ಹನಿಟ್ರ‍್ಯಾಪ್ ವಿಷಯದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಅವರು ಸಿಎಂ ಹಾಗೂ ಗೃಹಮಂತ್ರಿಗಳಿಗೆ ತಮಗೆ ಏನಾಗಿದೆ ಎನ್ನುವುದನ್ನು ತಿಳಿಸಿದ್ದಾರೆ. ಈ ರೀತಿ ರಾಜಕೀಯವಾಗಿ ಯಾರೇ ಮಾಡಿದರೂ ಅದು ತಪ್ಪು. ತೇಜೋವಧೆ ಮಾಡುವಂತಹದು ತಪ್ಪು, ಇದು ಬಹಳ ಹೀನಾಯವಾದ ಕೆಲಸ. ಹೀಗಾಗಿ ಇದನ್ನು ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಎಂದು ತನಿಖೆಯಾಗಬೇಕು. ಸಿಎಂ ಹಾಗೂ ಗೃಹಮಂತ್ರಿಗಳು ಅದರ ಬಗ್ಗೆ ಗಮನ ಹರಿಸುತ್ತಾರೆ ಎಂದರು.ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ’ಬಿಗ್ ಬಾಸ್’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್
- Advertisement 2-
- Advertisement 3-
ಕಾಂಗ್ರೆಸ್ (Congress) ಲಿಂಗಾಯತ ನಾಯಕರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಭೆ ಮಾಡುತ್ತೇನೆ ಎಂದು ಹೇಳಿದ್ದು ಯಾವಾಗ? ಅದು ಮುಖ್ಯ. ಪತ್ರಕರ್ತರು ಪ್ರಶ್ನೆ ಕೇಳಿದಾಗ ನಾನು ಮಾತನಾಡಿದ್ದೇನೆ. ಲಿಂಗಾಯತರು ಸಭೆ ಮಾಡಿದರೆ ತಪ್ಪೇನು ಎಂದು ಹೇಳಿದ್ದೇನೆ. ನಮ್ಮಲ್ಲಿರುವ ಹಲವು ಸಮಸ್ಯೆಗಳಿಗೆ, ಮೀಸಲಾತಿ ಸಮಸ್ಯೆ, ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ, ವಚನ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗಾಗಿ ನಾವು ಸಭೆ ಮಾಡಿದರೆ ತಪ್ಪಿಲ್ಲ. ಲಿಂಗಾಯತರು ಅಷ್ಟೇ ಅಲ್ಲದೆ ಬೇರೆಯವರು ಕೂಡ ಸಭೆ ಮಾಡಿದರೆ ತಪ್ಪೇನು? ನನ್ನ ಹೇಳಿಕೆ ರಾಜಕೀಯ ಬಣ್ಣ ಪಡೆದರೆ ಏನು ಮಾಡಕ್ಕಾಗಲ್ಲ ಎಂದು ಹೇಳಿದರು.
- Advertisement 4-
ನಮ್ಮಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸ್ವಯಂಘೋಷಿತವಾಗಿ ಸಿಎಂ ಆಗುತ್ತೇವೆ ಎಂದು ನಾವೇನು ಘೋಷಣೆ ಮಾಡಿಕೊಂಡಿಲ್ಲ. ವೀರೇಂದ್ರ ಪಾಟೀಲ್‌ರ ನಂತರ ಲಿಂಗಾಯತರಿಗೆ ಅಧಿಕಾರ ಸಿಕ್ಕಿಲ್ಲ ಎನ್ನುವುದನ್ನು ಮಾತ್ರ ನಾನು ಹೇಳಿದ್ದೇನೆ. ಲಿಂಗಾಯತರ ನಾಯಕತ್ವದಲ್ಲಿ 186 ಸೀಟ್ ಬಂದಿದ್ದವು. ಆದರೆ ವೀರೇಂದ್ರ ಪಾಟೀಲ್ ಅವರನ್ನು ಇಳಿಸಿದ ಬಳಿಕ 36 ಶಾಸಕರು ಮಾತ್ರ ಆಯ್ಕೆಯಾದರು. ಹೀಗಾಗಿ ಲಿಂಗಾಯತ ನಾಯಕತ್ವದ ಬಗ್ಗೆ ಹೇಳಿದ್ದೇನೆ ಅಷ್ಟೇ ಎಂದು ಪರೋಕ್ಷವಾಗಿ ಲಿಂಗಾಯತ ಸಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟರು.ಇದನ್ನೂ ಓದಿ: ಪತಿಯನ್ನು ಪೀಸ್ ಪೀಸ್ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!