ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚೀಟಿ ಕೊಟ್ಟವರು ಯಾರು? ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುರೇಶ್ ಗೌಡ ಆಗ್ರಹಿಸಿದ್ದಾರೆ.
ವಿಧಾಸನಸಭೆಯಲ್ಲಿ ಮಾತನಾಡಿದ ಅವರು, ಯತ್ನಾಳ್ ಮಾತನಾಡುತ್ತಿದ್ದಾಗ ಅವರಿಗೆ ಒಂದು ಚೀಟಿ ಬಂತು. ಚೀಟಿ ಬಂದ ಮೇಲೆ ಯತ್ನಾಳ್ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತಾಡಿದರು ಎಂದರು.
ಯತ್ನಾಳ್ ಹನಿಟ್ರ್ಯಾಪ್ ಮಾತನಾಡುವುದಕ್ಕೂ ಮುನ್ನ ಒಂದು ಚೀಟಿ ಆಡಳಿತ ಪಕ್ಷದಿಂದ ಬಂತು. ಈ ಚೀಟಿ ಕೊಟ್ಟವರು ಯಾರು? ಇದರ ತನಿಖೆ ಆಗಬೇಕು? ಚೀಟಿ ಕೊಟ್ಟವರು ಸಿಎಂಗೆ ಆಪ್ತರಾ? ಇದರ ತನಿಖೆ ಆಗಬೇಕು, ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಶುಕ್ರವಾರ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿಯೇ ಸಹಕಾರಿ ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಪ್ರಸ್ತಾಪ ಮಾಡಿದರು. ಮಾರ್ಶಲ್ ಒಬ್ಬರು ಚೀಟಿ ನೀಡಿದ ಬಳಿಕ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಯತ್ನಾಳ್ ಪ್ರಸ್ತಾಪ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು.