ಬೆಂಗಳೂರು: ಸಚಿವ ರಾಜಣ್ಣ ಆರೋಪಿಸಿರುವ ಹನಿಟ್ರ್ಯಾಪ್ ಕೇಸ್‌ನ್ನು ನ್ಯಾಯಾಧೀಶರ ನೇತೃತ್ವದ (Judicial Inquiry) ಅಥವಾ ಸಿಬಿಐನಿಂದ (CBI) ತನಿಖೆ ಮಾಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ವಿಧಾನಸೌಧ ಸಾಕಷ್ಟು ಮಹನೀಯರು ಪ್ರತಿನಿಧಿಸಿರುವ ಒಂದು ದೇವಾಲಯ. ಇಂತಹ ದೇವಾಲದಲ್ಲಿ ಈ ಮೊದಲು ವಿಷಯಾಧಾರಿತ ಚರ್ಚೆ ಮಾಡಿದ್ದಾರೆ. ಆದರೆ ಈಗ ಸಿಎಂ ಕ್ಯಾಬಿನೆಟ್‌ನ ಪ್ರಭಾವಿ ಮಂತ್ರಿಗಳು ಸದನದಲ್ಲೇ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಅನ್ನೋದಕ್ಕೆ ಇದು ಉದಾಹರಣೆ. ರಾಜಣ್ಣ ಹನಿಟ್ರ್ಯಾಪ್ ಕೇಸ್ SIT ಬೇಡ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಹೀಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಇಲ್ಲವೇ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ
ರಾಹುಲ್ ಗಾಂಧಿ ಮಾತೆತ್ತಿದ್ರೆ SC-ST ಪರ ದ್ವನಿ ಎತ್ತೋ ಪಕ್ಷ ಕಾಂಗ್ರೆಸ್ (Congress) ಅಂತಾರೆ. ಆದರೆ ಕಾಂಗ್ರೆಸ್ ಶಾಸಕರ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಬಿತ್ತು. ಕೊನೆಗೆ ಅವರಿಗೆ ಟಿಕೆಟ್ ಕೊಡದಂತೆ ಕಾಂಗ್ರೆಸ್ ನಡು ಬೀದಿಯಲ್ಲಿ ಕೈ ಬಿಡ್ತು. ಇವತ್ತು ST ಸಮುದಾಯದ ಪ್ರಭಾವಿ ನಾಯಕ ರಾಜಣ್ಣ. ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕೈ ಕಟ್ಟಿ ಹಾಕೋ ವಾತಾವರಣ ಸೃಷ್ಟಿಯಾಗಿದೆ. ಇದರ ಹಿಂದೆ ಇರೋ ಪ್ರಭಾವ ಯಾರು ಅಂತ ಏಳೂವರೆ ಕೋಟಿ ಕನ್ನಡಿಗರಿಗೆ ಈಗಾಗಲೇ ಗೊತ್ತಾಗಿದೆ. ರಾಜಕಾರಣದಲ್ಲಿ ವಿಷಯಾಧಾರಿತ ಚರ್ಚೆ, ಸೈದ್ದಾಂತಿಕ ಹೋರಾಟ ಇರಬೇಕು. ಹೀಗೆ ವೈಯಕ್ತಿಕವಾಗಿ ತೇಜೋವಧೆ ಮಾಡೋದು, ಟಾರ್ಗೆಟ್ ಮಾಡೋದು ಸರಿಯಲ್ಲ. ಮೂರು ಪಕ್ಷದಲ್ಲಿ ಹನಿಟ್ರ್ಯಾಪ್ ಆಗಿದೆ ಅಂತ ರಾಜಣ್ಣ ಹೇಳಿದ್ದಾರೆ. 224 ಶಾಸಕರಿಗೆ ರಕ್ಷಣೆ ಕೊಡದ ಈ ಸರ್ಕಾರಕ್ಕೆ ರಾಜ್ಯದ ಜನರಿಗೆ ರಕ್ಷಣೆ ಕೊಡೋಕೆ ಸಾಧ್ಯನಾ? ಸರ್ಕಾರ ಉತ್ತರ ಕೊಡಬೇಕು ಎಂದಿದ್ದಾರೆ.
ಸಿಬಿಐ ತನಿಖೆ ಮಾಡಿಸ್ತಾರೋ, ನ್ಯಾಯಾಧೀಶರಿಂದ ತನಿಖೆ ಮಾಡಿಸ್ತಾರೋ ಗೊತ್ತಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಯಾರು ತಪ್ಪಿತಸ್ಥರು ಇದ್ದಾರೆ. ಯಾರು ಎಷ್ಟೇ ಪ್ರಭಾವಿಗಳು ಇರಲಿ. ಅವರ ಮೇಲೆ ಕ್ರಮ ಆಗಬೇಕು. ಕಾಂಗ್ರೆಸ್‌ನಲ್ಲಿ SC-ST ಸಮುದಾಯದವರು ಮೀಟಿಂಗ್ ಮಾಡೋಕೆ ಫ್ರೀಡಂ ಇಲ್ಲ. ಒಬ್ಬ ಮಹಾನುಭಾವರು ತಡೆ ಹಾಕ್ತಾರೆ. ಹೈಕಮಾಂಡ್ ನಾಯಕರನ್ನ ಕರೆದುಕೊಂಡು ಬಂದು ಮೀಟಿಂಗ್ ರದ್ದು ಮಾಡ್ತಾರೆ. ಹನಿಟ್ರ್ಯಾಪ್ ಮಾಡಿದ ನಾಯಕ ಯಾರು ಅಂತ ನನಗೆ ಗೊತ್ತಿಲ್ಲ. ಅದಕ್ಕೆ ತನಿಖೆ ಆಗಬೇಕು. ಬಹಳ ಜನ ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ. ಇದರ ಒಳ ಮರ್ಮ ಏನು? ಇದರ ಹಿಂದೆ ಇರೋರು ಯಾರು ಅಂತ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿರೋದನ್ನ ವಿರೋಧಿಸಿದ ಅವರು, ಸ್ಪೀಕರ್ ಅವರು ಬಿಜೆಪಿಯ 18 ಶಾಸಕರನ್ನ ಅಮಾನತು ಮಾಡಿದ್ದಾರೆ. ಹನಿಟ್ರ್ಯಾಪ್ ಕೇಸ್ ಸಿಬಿಐಗೆ ಕೊಡಿ ಅಂತ ಶಾಸಕರ ಕೇಳಿದ್ದಾರೆ. ಶಾಸಕರು ಇದನ್ನ ಕೇಳಿದ್ದಕ್ಕೆ 6 ತಿಂಗಳು ಸ್ಪೀಕರ್ ಅವರು ಅಮಾನತು ಮಾಡಿರೋದು ತಪ್ಪು. ರಾಜ್ಯದ ಜನ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಸ್ಪೀಕರ್ ನಡೆ ವಿಪರ್ಯಾಸ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿಕೆಶಿ ಮಾತಾಡಬಾರದು: ನಿಖಿಲ್ ಕುಮಾರಸ್ವಾಮಿ