ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ (Honey Trap Case) ರಾಜಣ್ಣ ದೂರು ಕೊಡದೇ ನಾನೇನು ಮಾಡಲಿ? ಎಫ್‌ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದು ಗೃಹಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಣ್ಣ (KN Rajanna) ಏನು ಮಾಡುತ್ತಾರೋ ನೋಡೋಣ. ರಾಜಣ್ಣಗೆ ಬಹಳ ಜನ ಆಪ್ತರು ಇದ್ದಾರೆ. ನನ್ನ ಬಿಟ್ಟು ಬಹಳ ಜನ ಇದ್ದಾರೆ. ಅವರು ಯಾರ ಜೊತೆ ಏನು ಮಾತನಾಡುತ್ತಾರೋ ನನಗೇನು ಗೊತ್ತು ಎಂದರು. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿ – ತಂದೆ ಸ್ಥಳದಲ್ಲೇ ಸಾವು
ಹನಿಟ್ರ‍್ಯಾಪ್ ವಿಚಾರ ಬೋಗಸ್ ಎಂದಿದ್ದ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಈಗ ಇದರ ಬಗ್ಗೆ ಏನೂ ಮಾತಾಡಲ್ಲ. ರಾಜಣ್ಣ ದಿನಪೂರ್ತಿ ನನ್ನ ಜೊತೆಯೇ ಇದ್ದರು, ಏನೂ ಹೇಳಿಲ್ಲ. ರಾಜಣ್ಣಗೆ ನನ್ನನ್ನೂ ಸೇರಿದಂತೆ ಬಹಳ ಜನ ಆಪ್ತರು ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Tamil Nadu | ಕಳ್ಳತನದ ಆರೋಪ – ಸೀನಿಯರ್ ಮೇಲೆ ಜೂನಿಯರ್ಸ್ ಹಲ್ಲೆ, 13 ವಿದ್ಯಾರ್ಥಿಗಳು ಸಸ್ಪೆಂಡ್