– ಹನಿಟ್ರ್ಯಾಪ್ ಪ್ರಕರಣದಲ್ಲಿ ಎದುರಾಳಿಗಳ ಕೈವಾಡ
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿದ ಹಾಲಿ ಶಾಸಕ ರಾಸಲೀಲೆ ವಿಡಿಯೋಗೆ ಹೆದರಿ ಬರೋಬ್ಬರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ ಎನ್ನುವುದು ಸಿಸಿಬಿ ತನಿಖೆ ವೇಳೆ ಬಹಿರಂಗವಾಗಿದೆ.
ಹನಿ ಹನಿ ಎಂದು ಆಸೆಗೆ ಬಿದ್ದು ಹಾಲಿ ಶಾಸಕ ಬರೋಬ್ಬರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಮೊದಲು 50 ಕೋಟಿ ರೂ. ಕೊಡದಿದ್ದರೆ ವಿಡಿಯೋ ಲೀಕ್ ಮಾಡ್ತೀವಿ ಎಂದಿದ್ದ ಆರೋಪಿಗಳು, ಕೊನೆಗೆ 50 ಕೋಟಿ ಕೊಡಲು ಆಗಲ್ಲ ಎಂದಾಗ 10 ಕೋಟಿಗೆ ಡೀಲ್ ಫಿಕ್ಸ್ ಮಾಡಿದ್ದರು. ಈ 10 ಕೋಟಿ ಹಣವನ್ನು ಇನ್ಸ್ಟಾಲ್ಮೆಂಟ್ನಲ್ಲಿ ಕೊಡುವುದಾಗಿ ಶಾಸಕ ಒಪ್ಕೊಂಡಿದ್ದರು. 1 ಕೋಟಿ ರೂ. ಹಣವನ್ನ ಆರೋಪಿಗಳಿಗೆ ಎಂಎಲ್ಎ ತಲುಪಿಸಿದ್ದರು. ಇದಲ್ಲದೇ ಮತ್ತಿಬ್ಬರು ಶಾಸಕರು ಕೂಡ ಆರೋಪಿಗಳಿಗೆ ಹಣ ನೀಡಿದ್ದರು. ವಿಡಿಯೋ ಎಲ್ಲಿ ಹೊರಬರುತ್ತೋ ಎಂದು ಭಯಬಿದ್ದು ಶಾಸಕರು ಹಣ ನೀಡಿದ್ದರು ಎನ್ನುವುದು ಸಿಸಿಬಿ ತನಿಖೆ ವೇಳೆ ಬಟಾಬಯಲಾಗಿದೆ. ಇದನ್ನೂ ಓದಿ:ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ
Advertisement
Advertisement
ರಾಜಕೀಯ ನೌಟಂಕಿ ಆಟವನ್ನು ಯಾರು ಊಹೆನೂ ಮಾಡೋದಕ್ಕೆ ಆಗೋದಿಲ್ಲ. ಲಾಭಕ್ಕಾಗಿ ರಾಜಕೀಯ ನಾಯಕರ ಕೈಯಲ್ಲಿ ಏನು ಬೇಕಾದರೂ ಮಾಡಿಸಿ ಬಿಡುತ್ತೆ. ಹೌದು ಹನಿಟ್ರ್ಯಾಪ್ ಪ್ರಕರಣದಲ್ಲಿ ಶಾಸಕನನ್ನು ಸಿಲುಕಿಸಿರೋದರಲ್ಲಿ ಆತನ ಎದುರಾಳಿಗಳ ಕೈವಾಡವಿದೆ ಎನ್ನುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಶಾಸಕರಿಗೆ ಹೆಣ್ಣಿನ ಮೋಹವಿದೆ ಎಂದು ತಿಳಿದಿದ್ದ ಎದುರಾಳಿಗಳು ರಾಘವೇಂದ್ರನ ಗ್ಯಾಂಗ್ ಬಳಸಿಕೊಂಡು ಡೀಲ್ ಮಾಡಿಕೊಳ್ಳುತ್ತಿದ್ದರು. ಶಾಸಕರನ್ನು ಹೇಗೆ ಖೆಡ್ಡಾಕ್ಕೆ ಕೆಡವಿಕೊಳ್ಳೋದು ಅನ್ನೊದನ್ನು ಕೂಡ ಹೇಳಿ ಕೊಡುತ್ತಿದ್ದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವರ ಹನಿಟ್ರ್ಯಾಪ್ – 10 ಕೋಟಿ ನಿರೀಕ್ಷೆಯಲ್ಲಿದ್ದವನಿಗೆ ಕೋಳ
Advertisement
ಅಷ್ಟೇ ಅಲ್ಲ ಶಾಸಕರ ರಾಸಲೀಲೆ ಸೆರೆ ಹಿಡಿಯೋದಕ್ಕೆ ಕ್ಯಾಮೆರಾಗಳನ್ನು ಕೂಡ ಎದುರಾಳಿಗಳೇ ಗ್ಯಾಂಗ್ಗೆ ತೆಗೆದುಕೊಟ್ಟಿದ್ದರು ಎನ್ನಲಾಗಿದೆ. ಸಿಸಿಬಿ ಅಧಿಕಾರಿಗಳ ತನಿಖೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿಯೇ ಇರುವ ರಾಘವೇಂದ್ರ ಇದೆಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಕ್ಯಾಮೆರಾ ತೆಗೆದುಕೊಟ್ಟವರು ಮುಂಗಡ ಹಣವನ್ನೂ ಪಾವತಿ ಮಾಡಿದ್ದಾರೆ. ಈ ಎಲ್ಲಾ ಹೇಳಿಕೆಗಳ ಬಳಿಕ ರಾಘವೇಂದ್ರ ಸ್ವ-ಇಚ್ಚಾ ಹೇಳಿಕೆ ನೀಡಿದ್ದು, ಹಣ ಕೊಟ್ಟವರು ರಾಘವೇಂದ್ರನ ಭೇಟಿ ನಡೆದಿದ್ದಕ್ಕೆ ಸಾಕ್ಷ್ಯವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶಾಸಕನ ಎದುರಾಳಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿಸಲಿದ್ದಾರೆ ಎನ್ನಲಾಗಿದೆ.
Advertisement
ಯಾರು ಈ ರಾಘವೇಂದ್ರ?
ಆರೋಪಿ ರಾಘವೇಂದ್ರ ಶಿವಮೊಗ್ಗ ಮೂಲದ ನಿವಾಸಿಯಾಗಿದ್ದು, ತಾಯಿಯೊಂದಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು. ಸೈಬರ್ ಕ್ರೈಂಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪರಿಣಿತಿ ಹೊಂದಿದ್ದನು ಎಂಬುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಸಣ್ಣ ಪುಟ್ಟ ಕ್ರೈಂ ಮಾಡಿದ್ರೆ ಸ್ವಲ್ಪ ಹಣ ಸಿಗುತ್ತದೆ. ಹೆಚ್ಚು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದನು. ತನ್ನ ಗೆಳತಿ ಮೂಲಕ ಶಾಸಕರ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದನು ಎಂಬ ಆರೋಪ ಕೇಳಿ ಬಂದಿದೆ.