ಬೆಂಗಳೂರು: ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ರಾಜೇಂದ್ರಗೆ ಹನಿಟ್ರ‍್ಯಾಪ್ (Honeytrap) ಮಾಡೋದಕ್ಕೆ ಪ್ರಯತ್ನ ನಡೆದಿತ್ತು ಎಂಬ ಪ್ರಕರಣ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ.
ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸುವ ಮನಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿಗಳೇ ಅಭಯ ಹಸ್ತ ನೀಡಿದ್ದು, ಮಂಗಳವಾರ ಪ್ರಕರಣ ದಾಖಲು ಮಾಡಲಿದ್ದಾರೆ. ಮಾಹಿತಿಯ ಪ್ರಕಾರ ಎಸ್‌ಐಟಿ (SIT) ರಚನೆ ಮಾಡಿ ಎಸ್‌ಐಟಿಯ ಮೂಲಕವೇ ತನಿಖೆ ಮಾಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್
ಕಳೆದ ಮೂರು ತಿಂಗಳಿಂದ ತುಮಕೂರು ಮತ್ತು ಬೆಂಗಳೂರಿನ ವಿವಿಧ ಭಾಗದಲ್ಲಿ ಈ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ತನಿಖೆ ದೃಷ್ಟಿಯಿಂದ ಎಸ್‌ಐಟಿ ರಚನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರು ಆಕ್ಟೀವ್ – ಮುಂದಿನ ನಾಲ್ಕೈದು ದಿನ ಮಳೆ ಸಾಧ್ಯತೆ
ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ರಾಜಣ್ಣ, ಕರ್ನಾಟಕ ಸಿ.ಡಿ, ಪೆನ್‌ಡ್ರೈವ್‌ಗೆ ಫ್ಯಾಕ್ಟರಿ ಆಗಿದೆ ಅಂತ ಬಹಳ ಜನ ಹೇಳ್ತಾರೆ. ಬಹಳ ಗುರುತರ ಆರೋಪ ಇದು. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಬರ್ತಿವೆ. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಮೇಲೂ ಸಿಡಿ, ಪೆನ್‌ಡ್ರೈವ್ ಇದೆ. ಕೆಲವರು ಈಗಾಗಲೇ ಸ್ಟೇ ತಗೊಂಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತ ಆಗಿಲ್ಲ. ರಾಷ್ಟ್ರದ ಎಲ್ಲ ಪಕ್ಷಗಳ ಮುಖಂಡರ ಹನಿಟ್ರ್ಯಾಪ್ ಪೆನ್‌ಡ್ರೈವ್‌ಗಳಿವೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡ್ತೇನೆ. ಈ ದೂರು ಆಧರಿಸಿ ಪರಮೇಶ್ವರ್ ತನಿಖೆ ಮಾಡಿಸಲಿ. ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲ ಪ್ರೊಡ್ಯೂಸರ್‌ಗಳು, ಡೈರೆಕ್ಟರ್ ಗಳು ಇದ್ದಾರೆ ಅಂತ ಹೊರಗೆ ಬರಲಿ. ಜನಕ್ಕೆ ಗೊತ್ತಾಗಲಿ ಅಂತ ಒತ್ತಾಯಿಸಿದರು. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!
ಸುಮಾರು 48 ಜನರ ವಿರುದ್ಧ ಸಿ.ಡಿ ಪೆನ್‌ಡ್ರೈವ್ ಮಾಡಲಾಗಿದೆ. ಇದೊಂದು ಪಿಡುಗು. ಸಾರ್ವಜನಿಕ ಜೀವನದಲ್ಲಿ ಇರೋರಿಗೆ ಗೌರವ ಬರಬೇಕು. ಹೀಗಾಗಿ ಲಿಖಿತ ದೂರು ಕೊಡ್ತೇನೆ. ಸೂಕ್ತ ತನಿಖೆ ಮಾಡಿಸಲಿ, ಇದರ ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗೆ ಬರಲಿ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಪುರಾವೆ ಇಟ್ಕೊಂಡಿದ್ದೇನೆ. ಪರಮೇಶ್ವರ್ ವಿಶೇಷ ತನಿಖೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಅಂತ ಬಹಿರಂಗ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: Bengaluru | ಮದುವೆ ಸಂಭ್ರಮದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ