Crime

ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

Published

on

Share this

ಚಂಡೀಘಢ: ಅತ್ಯಾಚಾರಿ ಬಾಬಾ ಮತ್ತು ದತ್ತು ಪುತ್ರಿ ಹನಿಪ್ರೀತ್ ನಡುವಿನ ಸಂಬಂಧದ ಹಿಂದಿನ ರಹಸ್ಯವನ್ನ ಹನಿಪ್ರೀತ್‍ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗುಪ್ತಾ, ಬಾಬಾ ಮತ್ತು ಹನಿಪ್ರೀತ್ ಅನೈತಿಕ ಸಂಬಂಧವನ್ನು ಹೊಂದಿದ್ದರು. ಅನುಯಾಯಿಗಳು ಮತ್ತು ಇತರರನ್ನು ಮರುಳು ಮಾಡಲು ತಂದೆ-ಮಗಳು ಎಂದು ಹೇಳಿಕೊಂಡಿದ್ದರು. ಯಾವ ತಂದೆ ತಾನೇ ಮಗಳನ್ನ ಹಾಸಿಗೆ ಮೇಲೆ ಮಲಗಿಸಿಕೊಳ್ಳುತ್ತಾರೆ? ಅವಳು ಯಾವಾಗ್ಲೂ ಬಾಬಾ ಜೊತೆ ಇರುತ್ತಿದ್ದಳು ಎಂದು ಹೇಳಿದ್ದಾರೆ.

ರಾಮ್ ರಾಹೀಮ್ ಹಾಗೂ ಹನಿಪ್ರೀತ್ ಇಬ್ಬರೂ ಬಾಬಾನ ಗುಫಾ(ಕೊಠಡಿ)ಯಲ್ಲಿ ಒಟ್ಟಾಗಿ ಇದ್ದಿದ್ದನ್ನು ನಾನು ನೋಡಿದ್ದೆ. ಆಕೆ ನನ್ನ ಜೊತೆ ಯಾವತ್ತೂ ಮಲಗಿಲ್ಲ. ಪ್ರತಿ ರಾತ್ರಿ ರಾಮ್ ರಹೀಮ್ ಜೊತೆ ಇರುತ್ತಿದ್ದಳು. ಬಾಬಾ ನನ್ನನ್ನು ಬಂಧಿಯಾಗಿಸಿದ್ದ. ಆಕೆಗೆ ನನ್ನ ಬಳಿ ಬರಲು ಬಿಡುತ್ತಿರಲಿಲ್ಲ ಅಂತ ಮಾಧ್ಯಮಗಳಿಗೆ ಗುಪ್ತಾ ತಿಳಿಸಿದ್ದಾರೆ.

ಬಾಬಾ ಹಾಗೂ ನನ್ನ ಮಾಜಿ ಪತ್ನಿ ಹನಿಪ್ರೀತ್ ನಡುವೆ ಅನೈತಿಕ ಸಂಬಂಧ ಇರುವುದು ನನಗೆ ತಿಳಿದ ಮೇಲೆ ಈ ವಿಷಯವನ್ನ ಎಲ್ಲೂ ಬಾಯಿಬಿಡದಂತೆ ಅವನು ನನಗೆ ಮತ್ತು ನನ್ನ ಕುಟುಂಬದವರಿಗೆ ಬೆದರಿಕೆ ಒಡ್ಡಿದ್ದ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ತನ್ನ ಚೇಲಾಗಳಿಗೆ ಹೇಳಿದ್ದ ಎಂದು ತಿಳಿಸಿದ್ದಾರೆ.

ಇದಾದ ನಂತರ ಡೇರಾ ಬೆಂಬಲಿಗರು ನಮ್ಮನ್ನು ಹಿಂಬಾಲಿಸುತ್ತಿದ್ದರು. ಆದ್ದರಿಂದ ನಾನು ಹನಿಪ್ರೀತ್‍ನಿಂದ ವಿಚ್ಛೇದನ ಪಡೆದು ಡೇರಾವನ್ನು ಬಿಟ್ಟು ಜುಲೈ 2011 ರಲ್ಲಿ ಪಂಚಕುಲಕ್ಕೆ ಹೋದೆ. ನನ್ನ ತಂದೆ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಡೇರಾದಲ್ಲಿ ಹೂಡಿಕೆ ಮಾಡಿದ್ದರು. ಬಾಬಾ ನನಗೆ ಮತ್ತು ನನ್ನ ಕುಟುಂಬದವರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡಿದ್ದ ಎಂದು ಗುಪ್ತಾ ಹೇಳಿದ್ದಾರೆ.

ಬಾಬಾ ತನ್ನ ರಹಸ್ಯ ಗುಹೆಯಲ್ಲಿ ಬಿಗ್ ಬಾಸ್ ರೀತಿಯ ಗೇಮ್ ಆಡಿಸುತ್ತಿದ್ದ. 6 ಜೋಡಿಗಳನ್ನು ಬಿಗ್‍ಬಾಸ್ ಮನೆಯಲ್ಲಿ 28 ದಿನಗಳ ಕಾಲ ಇಟ್ಟಿದ್ದ. ಈ ಆಟಕ್ಕೆ ಅವನೇ ಜಡ್ಜ್ ಆಗಿದ್ದ. ಇದರಲ್ಲಿ ನನ್ನ ಮಾಜಿ ಪತ್ನಿ ಕೂಡ ಭಾಗವಹಿದ್ದಳು. ಕೊನೆಯದಾಗಿ ಅವಳೇ ಗೆದ್ದಿದ್ದಳು ಎಂದು ಗುಪ್ತಾ ಹೇಳಿದ್ದಾರೆ.

ಇಬ್ಬರು ಸಾದ್ವಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್‍ಗೆ 20 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಸದ್ಯ ಹನಿಪ್ರೀತ್ ತಲೆಮರೆಸಿಕೊಂಡಿದ್ದು ಹರಿಯಾಣ ಪೊಲೀಸರ 43 ಮೋಸ್ಟ್ ವಾಂಟೆಡ್‍ಗಳ ಪಟ್ಟಿಯಲ್ಲಿ ಮೊದಲಿಗಳಾಗಿದ್ದಾಳೆ.

Click to comment

Leave a Reply

Your email address will not be published. Required fields are marked *

Advertisement
Advertisement