ಹನಿಮೂನ್ ಹಂತಕಿಯ ಮತ್ತೊಂದು ರಹಸ್ಯ ಬಯಲು – 3 ವಾರಗಳಲ್ಲಿ ಆ ಸಂಖ್ಯೆಗೆ 234 ಬಾರಿ ಫೋನ್‌ ಕಾಲ್‌ ಮಾಡಿದ್ದ ಸೋನಂ

Public TV
3 Min Read
Meghalaya Honeymoon 7

ಶಿಲ್ಲಾಂಗ್‌: ಮೇಘಾಲಯ (Meghalaya) ಮಧುಚಂದ್ರ ಪ್ರವಾಸ ಸಮಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆ ಪ್ರಕರಣದ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. 20 ಲಕ್ಷ ರೂ. ನೀಡಿ ಪತಿಯ ಕೊಲೆಗೇ ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿಕೊಂಡಿದ್ದ ಸೋನಂ (Sonam Raghuvanshi) ಯಾರ‍್ಯಾರ ಜೊತೆಗೆ ದೂರವಾಣಿ ಸಂಪರ್ಕದಲ್ಲಿದ್ದಳು ಅನ್ನೋದು ತನಿಖೆ ವೇಳೆ ಬಯಲಾಗಿದೆ.

ಸಂಜಯ್‌ ವರ್ಮಾ ಹೆಸರಿನಲ್ಲಿ ಸೇವ್‌ ಆಗಿದ್ದ ನಂಬರ್‌ಗೆ ಸೋನಂ ನೂರಾರು ಬಾರಿ ಕರೆ ಮಾಡಿದ್ದಳು. ಆದ್ರೆ ಈಗ ಆ ಸಂಖ್ಯೆ ಸ್ವಿಚ್‌ ಆಫ್‌ ಆಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Thriller Stories | ಕಾಮದಾಟಕ್ಕೆ ಅಡ್ಡಿಯಾದ ಗಂಡಂದಿರನ್ನೇ ಕೊಂದವರಿವರು…

Honeymoon Murder

ಹೌದು. ಕಳೆದ ಮಾರ್ಚ್ 1 ಮತ್ತು ಏಪ್ರಿಲ್ 8ರ ನಡುವೆ ಸೋನಂ, ಸಂಜಯ್ ವರ್ಮಾ ಜೊತೆಗೆ ಸಂಪರ್ಕದಲ್ಲಿದ್ದು 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾಳೆ. ಆದ್ರೆ ಈ ಸಂಖ್ಯೆ ಸಂಜಯ್‌ ವರ್ಮಾದ್ದೇ ಅನ್ನೋದು ಅಧಿಕೃತವಾಗಿಲ್ಲ. ಅಲ್ಲದೇ ಕೊಲೆ ನಡೆಯುವುದಕ್ಕೂ ಹಿಂದಿನ ಮೂರು ವಾರಗಳಲ್ಲಿ 234 ಬಾರಿ ಅದೇ ಸಂಖ್ಯೆಗೆ ಫೋನ್‌ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

ಜೂನ್‌ 8ರಂದು ರಾತ್ರಿ 11:20ಕ್ಕೆ ಸೋನಂ ಗಾಜಿಪುರದಲ್ಲಿ ಇದ್ದ ಸಮಯಕ್ಕೆ ಈ ಸಂಖ್ಯೆ ಸ್ವಿಚ್‌ಆಫ್‌ ಆಗಿತ್ತು. ಹೀಗಾಗಿ ಸುಳ್ಳು ದಾಖಲೆ ನೀಡಿ ನಕಲಿ ಸಿಮ್‌ ಕಾರ್ಡ್‌ ಬಳಸಿದ್ದಾರೆ ಅನ್ನೋ ಅನುಮಾನವೂ ಹುಟ್ಟಿಕೊಂಡಿದೆ. ಹೀಗಾಗಿ ಪೊಲೀಸರು ಮೊಬೈಲ್‌ ಸಂಖ್ಯೆ ಕುರಿತು ಮತ್ತಷ್ಟು ವಿವರಗಳನ್ನು ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬುರ್ಖಾ ಧರಿಸಿ ಇಂದೋರ್ ಸೇರಿದ್ದಳು ಹನಿಮೂನ್ ಹಂತಕಿ – ಮದುವೆಗೆ 11 ದಿನ ಮುನ್ನವೇ ಕೊಲೆಗೆ ಪ್ಲ್ಯಾನ್‌!

Meghalaya Honeymoon 6

ತನಿಖಾ ಪ್ರಗತಿ ಹೇಗಿದೆ?
ರಾಜಾ ರಘುವಂಶಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ನಿನ್ನೆ ಸ್ಥಳ ಮಹಜರು ನಡೆಸಿದ ಪೊಲೀಸರು ಘಟನೆಯನ್ನು ಮರುಸೃಷ್ಟಿಸಿ ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಇದೇ ವೇಳೆ ಮತ್ತೊಂದು ತನಿಖಾ ತಂಡ ರಾಜಾ ರಘುವಂಶಿ ಸಹೋದರ ಮನೆಯಲ್ಲಿ ವಿಚಾರಣೆ ನಡೆಸಿತ್ತು. ಶಿಲ್ಲಾಂಗ್‌ ಎಸ್‌ಐಟಿ ತಂಡವು ಇಂದು ಸೋನಂ ಮನೆಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Meghalaya Honeymoon

ತನ್ನ ಪ್ರಿಯಕರ ಕಳುಹಿಸಿದ್ದ ಸುಪಾರಿ ಹಂತಕರ ನೆರವಿನಿಂದ ತನ್ನ ಪತಿ ರಾಜಾ ರಘುವಂಶಿಯನ್ನೇ ಕೊಲೆ ಮಾಡಿರುವ ಸೋನಮ್‌ ರಘುವಂಶಿ, ಇದೀಗ ತನ್ನ ಪ್ರಿಯಕರ ರಾಜ್‌ ಕುಶ್ವಾಹ ಜೊತೆ ಜೈಲಿನ ಕಂಬಿ ಎಣಿಸುತ್ತಿದ್ದಾಳೆ. ಇದನ್ನೂ ಓದಿ: ಮಾಡೆಲ್ ಹತ್ಯೆ ಕೇಸ್ – ಗಂಡನ ಬಿಟ್ಟಿದ್ದ ರೂಪದರ್ಶಿಗೆ ನನ್ನ ಮದುವೆಯಾಗು ಅಂತ ಪೀಡಿಸ್ತಿದ್ದ 2 ಮಕ್ಕಳ ತಂದೆ

ಹನಿಮೂನ್‌ ಹಂತಕರು…
ಮೇಘಾಲಯ ಹನಿಮೂನ್‌ ಮರ್ಡರ್‌ ಮಿಸ್ಟರಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಧ್ಯಪ್ರದೇಶದ ರಾಜಾ ರಘುವಂಶಿ ಮತ್ತು ಸೋನಮ್‌ ರಘುವಂಶಿ ಕಳೆದ ಮೇ 11ರಂದು ಮದುವೆಯಾಗಿದ್ದರು. ಮೇ 20ರಂದು ಇಬ್ಬರೂ ಮೇಘಾಲಯಕ್ಕೆ ಹನಿಮೂನ್‌ ಪ್ರವಾಸ ಕೈಗೊಂಡಿದ್ದರು. ಆದರೆ ಮೇ 23ರಂದು ಈ ಜೋಡಿ ನೊಂಗ್ರಿಯಾಟ್ ಹಳ್ಳಿಯಲ್ಲಿರುವ ಹೋಂಸ್ಟೇಯಿಂದ ಹೊರಗೆ ಹೋದ ಗಂಟೆಗಳ ನಂತರ ನಾಪತ್ತೆಯಾಗಿತ್ತು. ಜೂನ್ 2ರಂದು ಈ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ, ರಾಜಾ ರಘುವಂಶಿ ಅವರ ಶವ ಪತ್ತೆಯಾಯಾಗಿತ್ತು. ಮೊದಲು ಮೇಘಾಲಯ ಪೊಲೀಸರು ದುಷ್ಕರ್ಮಿಗಳು ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿ, ಸೋನಮ್‌ ರಘುವಂಶಿ ಅವರನ್ನು ಅಪಹರಿಸಿದ್ದಾರೆ ಎಂದು ಶಂಕಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗತೊಡಗಿದಾಗ, ಸೋನಮ್‌ ಮತ್ತು ಆಕೆಯ ಪ್ರೇಮಿ ತಮ್ಮ ಸಹಚರರೊಂದಿಗೆ ಸೇರಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿರುವ ಸಂಗತಿ ಬಯಲಾಯಿತು. ಬಳಿಕ ಅವರು ರೂಪಿಸಿದ್ದ ಒಂದೊಂದೇ ರಹಸ್ಯಗಳು ಬಯಲಾದವು.

Share This Article