ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ (Honeytrap) ಜಾಲ ಹೆಚ್ಚಾಗಿದೆ. ಈ ಜಾಲದೊಳಗೆ ಸಿಲುಕಿ ಹೊರಬರಲಾರದೇ ಒದ್ದಾಡುತ್ತಿರುವ ಟೆಕ್ಕಿಯೋರ್ವ ಶಾಕಿಂಗ್ ಸ್ಟೋರಿ ಇಲ್ಲಿದೆ.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ (Techie) ಗೆ ಬರೋಬ್ಬರಿ ಮೂರು ಲಕ್ಷ ಸಂಬಳ. ಚಂದದ ಕುಟುಂಬ ಇಬ್ಬರು ಮಕ್ಕಳು, ಚಂದದ ಮಡದಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಇದ್ದ ಇವರ ಲೈಫ್‍ನಲ್ಲಿ ಎಂಟ್ರಿ ಕೊಟ್ಟಿದ್ದೇ ಹನಿಟ್ರ್ಯಾಪ್ ಜಾಲ. ಆರಂಭದಲ್ಲಿ ಸ್ನೇಹಿತನ ಮೂಲಕ ಪರಿಚಯವಾದ ಮಾಯಂಗನೆ ನಿಧಾನವಾಗಿ ಇವರ ಸಲುಗೆ ಪಡೆದುಕೊಂಡು ಸೆಲ್ಫಿ ಫೋಟೋ ವೀಡಿಯೋ (Selfie, photo, Video)ತೆಗೆದುಕೊಳ್ಳುತ್ತಿದ್ದಳು. ಅನಾರೋಗ್ಯದ ಕಾರಣವೊಡ್ಡಿ, ಆಗಾಗ ದುಡ್ಡನ್ನು ಪಡೆದುಕೊಳ್ಳುತ್ತಿದ್ದಳು. ನಂತರ ನಿಧಾನವಾಗಿ ಹನಿಟ್ರ್ಯಾಪ್ ವ್ಯೂಹ ಹೆಣೆದು ಟೆಕ್ಕಿಯನ್ನು ಬಲೆಗೆ ಬೀಳಿಸಿದ್ದಳು. ಇದನ್ನೂ ಓದಿ: ಆಪ್ ಸ್ಟೋರ್‌ನಿಂದ ಟ್ವಿಟ್ಟರ್ ಅನ್ನು ತೆಗೆಯೋದಾಗಿ ಆಪಲ್ ಬೆದರಿಕೆ ಹಾಕಿದೆ: ಮಸ್ಕ್
Advertisement
Advertisement
ಮೊದಮೊದಲು ಅನಾರೋಗ್ಯದ ನೆಪದಲ್ಲಿ ದುಡ್ಡು ವಸೂಲಿ ಮಾಡಿದ ಆಕೆ ಬಳಿಕ ನೇರವಾಗಿ ಲಕ್ಷ ಲಕ್ಷ ಹಣ ಕೊಡುವಂತೆ ಧಮ್ಕಿ ಹಾಕಲು ಆರಂಭಿಸಿದಳು. ಹಣ ಕೊಡದಿದ್ದರೆ ಸೆಲ್ಫಿ, ವೀಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದಳು. ಇಷ್ಟಕ್ಕೂ ಒಪ್ಪದಿದ್ದರೆ ಟೆಕ್ಕಿಯ ಪತ್ನಿಗೆ ಫೋಟೋ, ವೀಡಿಯೋ ಕಳಿಸುವ ಬೆದರಿಕೆ ಒಡ್ಡಿದಳು. 20 ಲಕ್ಷ ಹಣ ಕೊಟ್ಟ ಮೇಲೂ ಟಾರ್ಚರ್ ನಿಂತಿಲ್ಲ. ಇದರಿಂದ ಬೇಸತ್ತ ಟೆಕ್ಕಿ ಮತ್ತೆ ಹಣ ಕೊಡೋದಿಲ್ಲ ಎಂದಾಗ ಮಹಿಳೆಯಿಂದ ದೂರು ಕೊಡುವ ಬಗ್ಗೆ ಬ್ಲಾಕ್‍ಮೇಲ್ ಮಾಡಲಾಯಿತು. ಟೆಕ್ಕಿ ಕೆಲಸ ಮಾಡುವ ಕಂಪನಿಗೂ ಮೇಲ್ ಬರತೊಡಗಿತು. ಬಳಿಕ ಟೆಕ್ಕಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿತು. ಮತ್ತೆ ಹಣ ಕೊಡಲು ಒಪ್ಪದಿದ್ದಾಗ ಪತ್ನಿಗೂ ಫೋಟೋ, ವೀಡಿಯೋ ರವಾನೆ ಮಾಡಲಾಯಿತು.
Advertisement
Advertisement
ಕೊನೆಗೆ ಟೆಕ್ಕಿಯಿಂದ ಪತ್ನಿ ದೂರವಾದರು. ಹೀಗೆ ಟೆಕ್ಕಿಯನ್ನು ಗೋಳಾಡಿದ್ದಾಳೆ ಹನಿಟ್ರ್ಯಾಪ್ ಮಾಯಂಗನೆ. ಇದರಿಂದ ಸುಖಿ ಸಂಸಾರ ಮಾಡ್ತಿದ್ದ ಟೆಕ್ಕಿಯ ಜೀವನವೇ ಬರ್ಬಾದ್ ಆಗಿದೆ. ಸದ್ಯ ಪೊಲೀಸ್ ಠಾಣೆಯಲ್ಲೂ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ. ಇಂತಹ ಜಾಲದಿಂದ ನನ್ನ ಜೀವನವಂತೂ ಬೀದಿಗೆ ಬಂದಿದೆ ಬೇರೆಯವರು ಬಲಿಯಾಗಬಾರದು. ಹನಿಟ್ರ್ಯಾಪ್ ಒಂದು ವ್ಯವಸ್ಥಿತ ಜಾಲ. ಇದ್ರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ವಿಪರ್ಯಾಸ ಅಂದ್ರೇ ಈ ವಿಷಜಾಲದೊಳಗೆ ಸಿಲುಕಿದ್ರೆ ಹೊರಬರೋದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ.