ಸಿನಿಮಾದ ಫಸ್ಟ್ ಲುಕ್ ಕಾರಣದಿಂದಾಗಿ ವಿವಾದಕ್ಕೀಡಾಗಿದ್ದ ರಚೆಲ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಾಯಕಿ ಹನಿ ರೋಸ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಡೈನಾಮಿಕ್ ನಿರ್ದೇಶಕಿಯ ಜೊತೆ ಕೆಲಸ ಮಾಡಿದ್ದರ ಖುಷಿಯನ್ನು ಅವರು ಹಂಚಿಕೊಂಡಿದ್ದಾರೆ. ಮೂವತ್ತು ದಿನಗಳ ಚಿತ್ರೀಕರಣ ತುಂಬಾ ತ್ರಾಸದಾಯಕವಾಗಿತ್ತು ಎನ್ನುವ ವಿಚಾರವನ್ನೂ ಅವರು ಬರೆದುಕೊಂಡಿದ್ದಾರೆ.
Advertisement
ಸಿನಿಮಾದ ವಿವಾದವೇನು?
Advertisement
ನಟಿ ಹನಿ ರೋಸ್ (Honey Rose) ವಿರುದ್ಧ ಗೋರಕ್ಷಕರು ತಿರುಗಿ ಬಿದ್ದಿದ್ದರು. ಹನಿ ರೋಸ್ ನಟನೆಯ ಈ ಮಹಿಳಾ ಪ್ರಧಾನ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿತ್ತು. ಆ ಪೋಸ್ಟರ್ ನಲ್ಲಿ ಹನಿ ಗೋಮಾಂಸ (Beef) ಮಾರುವ ಅಂಗಡಿಯಲ್ಲಿ ಕೂತಿದ್ದರು. ಕೈಯಲ್ಲಿ ರಕ್ತಸಿಕ್ತ ಕತ್ತಿಯಿತ್ತು.
Advertisement
Advertisement
ರಚೆಲ್ (Rachel) ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾವಿದು. ಈ ಸಿನಿಮಾದಲ್ಲಿ ಹನಿ ರೋಸ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಆಕೆಯದ್ದು ಗೋಮಾಂಸ ಮಾರುವ ಯುವತಿ ಪಾತ್ರ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಗೋಮಾಂಸವನ್ನು ಸೂಚಿಸುವಂತಹ ಅನೇಕ ಸಂಗತಿಗಳನ್ನು ಪೋಸ್ಟರ್ ನಲ್ಲೂ ಅಳವಡಿಸಲಾಗಿತ್ತು.
ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಹನಿ ರೋಸ್ ಕೈಯಲ್ಲಿ ರಕ್ತಸಿಕ್ತ ಕತ್ತಿ, ಮುಂದೆ ಗೋಮಾಂಸ, ಹಿಂದೆ ಚರ್ಮ ಸುಲಿದ ಗೋವು, ಮತ್ತೊಂದು ಕಡೆ ಗೋವಿನ ತಲೆ ಹೀಗೆ ಡಿಸೈನ್ ಮಾಡಲಾಗಿತ್ತು. ಈ ಪೋಸ್ಟರ್ ವಿವಾದಕ್ಕೂ ಕಾರಣವಾಗಿತ್ತು. ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ನಾನಾ ಕಡೆ ಇದರ ವಿರುದ್ದ ಪ್ರತಿಭಟನೆಗಳು ನಡೆದಿದ್ದವು.
ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಳ್ಳುತ್ತಿದ್ದಂತೆಯೇ ಗೋ ರಕ್ಷಕರು ಆಕ್ರೋಶ ವ್ಯಕ್ತ ಪಡಿಸಿದ್ದರು. ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಹನಿ ರೋಸ್ ಇಂಥದ್ದೊಂದು ಪಾತ್ರ ಮಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಈ ಎಲ್ಲದರ ನಡುವೆಯೇ ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಆ ಸಂಭ್ರಮವನ್ನು ಚಿತ್ರತಂಡದೊಂದಿಗೆ ಹನಿ ರೋಸ್ ಆಚರಿಸಿದ್ದಾರೆ. ನಿರ್ದೇಶಕಿಯ ಜೊತೆಗಿನ ಫೋಟೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.
Web Stories