ಅಡುಗೆ ಕಲಿಯಲು ಅಂಬೆಗಾಲಿಡುತ್ತಿರುವವರು ಯಾವಾಗಲೂ ಸಸ್ಯಾಹಾರ ರೆಸಿಪಿಗಳನ್ನೇ ಟ್ರೈ ಮಾಡಬೇಕೆಂದೇನಿಲ್ಲ. ಸುಲಭದ, ಬೇಗನೇ ತಯಾರಿಸಬಹುದಾದ ನಾನ್‌ವೆಜ್ ರೆಸಿಪಿಗಳನ್ನೂ ನೀವು ಟ್ರೈ ಮಾಡಬಹುದು. ನಮ್ಮಲ್ಲಿ ಹಂದಿ ಮಾಂಸ ಪ್ರಿಯರು ಹಲವರು ಸಿಗುತ್ತಾರೆ. ಪೋರ್ಕ್ ಪ್ರಿಯರಿಗಾಗಿ ಹಾಗೂ ಸುಲಭದ ರೆಸಿಪಿಗಳನ್ನು ಹುಡುಕುತ್ತಿರುವವರಿಗಾಗಿ ನಾವಿಂದು ಪರ್ಫೆಕ್ಟ್ ಅಡುಗೆ ಹೇಳಿಕೊಡುತ್ತೇವೆ. ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ (Honey Garlic Pork Chops) ಮಾಡಿ, ನೀವು ಸವಿದು ನೋಡಿದರೆ, ಅದ್ಭುತ ಎನ್ನದೇ ಇರಲಾರಿರಿ.
Advertisement
ಬೇಕಾಗುವ ಪದಾರ್ಥಗಳು:
ದಪ್ಪಗೆ ಕತ್ತರಿಸಿದ ಮೂಳೆಗಳಿಲ್ಲದ ಹಂದಿ ಚಾಪ್ಸ್ – 6 ತುಂಡುಗಳು
ಆಲಿವ್ ಎಣ್ಣೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ನಿಮ್ಮ ಸ್ವಾದಕ್ಕನುಸಾರದಂತೆ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಕೆಚಪ್ – ಅರ್ಧ ಕಪ್
ಸೋಯಾ ಸಾಸ್ – ಕಾಲು ಕಪ್
ಜೇನುತುಪ್ಪ – ಕಾಲು ಕಪ್
ಕಾರ್ನ್ಫ್ಲೋರ್ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್ ಒಂದನ್ನು ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ, ಪೋರ್ಕ್ ಚಾಪ್ಸ್ಗಳನ್ನು ಅದರಲ್ಲಿಡಿ.
* ಉರಿಯನ್ನು ಏರಿಸಿ, ಮಾಂಸಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಸುತ್ತಲೂ ಚೆನ್ನಾಗಿ ಹಚ್ಚಿ.
* ಮಾಂಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಕಡಿಮೆ ಮಾಡಿ.
* ಈಗ ಒಂದು ಬೌಲ್‌ಗೆ ಬೆಳ್ಳುಳ್ಳಿ, ಕೆಚಪ್, ಸೋಯಾ ಸಾಸ್ ಮತ್ತು ಜೇನುತುಪ್ಪವನ್ನು ಹಾಕಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ಈಗ ಪೋರ್ಕ್ ಚಾಪ್ಸ್ ಮೇಲೆ ಸುರಿಯಿರಿ. ಪ್ಯಾನ್‌ಗೆ ಮುಚ್ಚಳ ಹಾಕಿ, 5 ನಿಮಿಷ ಬೇಯಿಸಿಕೊಳ್ಳಿ.
* ಈಗ ಒಂದು ಸಣ್ಣ ಬೌಲ್ ತೆಗೆದುಕೊಂಡು, ಅದರಲ್ಲಿ ಕಾರ್ನ್ ಫ್ಲೋರ್ ಹಾಕಿ, ಕಾಲು ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ನಿಧಾನಕ್ಕೆ ಪೋರ್ಕ್ ಮಿಶ್ರಣಕ್ಕೆ ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಇದೀಗ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k