ಈಗಷ್ಟೇ ಕುಕ್ ಮಾಡಲು ಪ್ರಾಕ್ಟೀಸ್ ಮಾಡ್ತಾ ಇರೋರು ಯಾವಾಗ್ಲೂ ವೆಜ್ ರೆಸಿಪಿಗಳನ್ನಷ್ಟೇ ಟ್ರೈ ಮಾಡ್ಬೇಕು ಅಂತೇನಿಲ್ಲ. ಫಟಾಫಟ್ ಅಂತ ಮನೆಯಲ್ಲೇ ಸಿಂಪಲ್ಲಾಗಿ ಮಾಡಬಹುದಾದ ರೆಸಿಪಿಗಳನ್ನೂ ಟ್ರೈ ಮಾಡಬಹುದು. ಅದ್ರಲ್ಲೂ ಹಂದಿ ಮಾಂಸ ಪ್ರಿಯರಿಗೆ ಹೊಸದೇನಾದ್ರೂ ಟ್ರೈ ಮಾಡಬೇಕು ಅಂತ ಅನ್ನಿಸಿದ್ರೆ, ಈ ರೆಸಿಪಿ ಓದಿ.. ನಾವಿಂದು ಪರ್ಫೆಕ್ಟ್ ಅಡುಗೆ ಹೇಳಿಕೊಡ್ತಿದ್ದೇವೆ. ಅದುವೆ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ (Honey Garlic Pork Chops).. ಇದನ್ನ ಹೇಗೆ ಮಾಡೋದು ಅಂತೀರಾ?….
ಬೇಕಾಗುವ ಪದಾರ್ಥಗಳು:
ದಪ್ಪಗೆ ಕಟ್ ಮಾಡಿದ ಬೋನ್‌ಲೆಸ್ ಹಂದಿ ಮಾಂಸ – ಅಗತ್ಯಕ್ಕೆ ತಕ್ಕಷ್ಟು ತುಂಡುಗಳು
ಎಣ್ಣೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬ್ಲಾಕ್ ಪೆಪ್ಪರ್ – ಸ್ವಾದಕ್ಕನುಗುಣವಾಗಿ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಕೆಚಪ್ – ಅರ್ಧ ಕಪ್
ಸೋಯಾ ಸಾಸ್ – ಕಾಲು ಕಪ್
ಜೇನುತುಪ್ಪ – ಕಾಲು ಕಪ್
ಕಾರ್ನ್ಫ್ಲೋರ್ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಬಾಣಲೆ ಒಂದನ್ನು ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ, ಪೋರ್ಕ್ ಚಾಪ್ಟ್‌ಗಳನ್ನ ಅದರಲ್ಲಿಡಿ.
* ಉರಿಯನ್ನು ಏರಿಸಿ, ಮಾಂಸಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಸುತ್ತಲೂ ಚೆನ್ನಾಗಿ ಹಚ್ಚಿ.
* ಮಾಂಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಕಡಿಮೆ ಮಾಡಿ.
* ಈಗ ಒಂದು ಬೌಲ್‌ಗೆ ಬೆಳ್ಳುಳ್ಳಿ, ಕೆಚಪ್, ಸೋಯಾ ಸಾಸ್ ಮತ್ತು ಜೇನುತುಪ್ಪವನ್ನ ಹಾಕಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನ ಈಗ ಪೋರ್ಕ್ ಚಾಪ್ಸ್ ಮೇಲೆ ಸುರಿಯಿರಿ. ಪ್ಯಾನ್‌ಗೆ ಮುಚ್ಚಳ ಹಾಕಿ, 5 ನಿಮಿಷ ಬೇಯಿಸಿಕೊಳ್ಳಿ.
* ಈಗ ಒಂದು ಸಣ್ಣ ಬೌಲ್ ತೆಗೆದುಕೊಂಡು, ಅದರಲ್ಲಿ ಕಾರ್ನ್ ಫ್ಲೋರ್ ಹಾಕಿ, ಕಾಲು ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನ ನಿಧಾನಕ್ಕೆ ಪೋರ್ಕ್ ಮಿಶ್ರಣಕ್ಕೆ ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನ ಸೇರಿಸಿ.
* ಇದೀಗ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.



