ಕೊಪ್ಪಳ: ಕೃಷಿ ಆಧಾರಿತ ಕಸುಬನ್ನು ಪರಿಚಯಿಸಲು ಕೊಪ್ಪಳದ ತೋಟಗಾರಿಕಾ ಇಲಾಖೆ ತನ್ನ ಆವರಣದಲ್ಲಿ ಮಧು ಮೇಳವನ್ನು ಆಯೋಜಿಸಿದೆ.
ಜೇನು ಸಾಕಣೆ ರೈತರಿಗೆ ಉತ್ತಮ ಆದಾಯ ತರುವ ಜೊತೆಗೆ ಬೆಳೆದ ಬೆಳೆ ಹೆಚ್ಚು ಇಳುವರಿ ಬರುವುದಕ್ಕೂ ಸಾಧ್ಯವಾಗುತ್ತೆ. ಇಂಥ ಕೃಷಿ ಆಧಾರಿತ ಕಸುಬನ್ನು ರೈತರಿಗೆ ಪರಿಚಯಿಸಲು ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ರೈತರು ತಾವೂ ಹೇಗೆ ಈ ಜೇನು ಕೃಷಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.
Advertisement
ತೋಟಗಾರಿಕಾ ಇಲಾಖೆ ಆವರಣದಲ್ಲಿ ಮಧು ಮೇಳವನ್ನು ಆಯೋಜಿಸಲಾಗಿದೆ. ಇಲ್ಲಿ ಮೂರು ದಿನಗಳ ಕಾಲ ಜೇನು ಪ್ರದರ್ಶನ, ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಗಾರ ನಡೆಯುತ್ತಿದ್ದು, ಜೇನು ತುಪ್ಪ, ಜ್ಯಾಮ್, ರಾಯಲ್ ಜೆಲ್ಲಿ, ಮೇಣಬತ್ತಿ, ಕ್ಯಾಂಡಿ ಸೇರಿ ಇತ್ಯಾದಿ ವಸ್ತುಗಳು ಮಾರಾಟ ನಡೆಯುತ್ತಿದೆ.
Advertisement
Advertisement
ಕೃಷಿಯಲ್ಲಿ ಇಳುವರಿ ಹೆಚ್ಚಿಸಲು, ಆರೋಗ್ಯ ಪಾಲನೆ ಹಾಗೂ ಜೀವರಾಶಿಗಳ ಉಳಿಯುವಿಕೆಗಾಗಿ ಜೇನು ಸಾಕಾಣಿಕೆ ಕೃಷಿಕರ ಉಪ ಕಸುಬಾಗಬೇಕು ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಜೇನು ಹುಳುಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲದೇ ಇದನ್ನು ಉಪ ಕಸುಬಾಗಿಸಿಕೊಳ್ಳುವುದರಿಂದ ಆದಾಯವೂ ಹೆಚ್ಚುತ್ತದೆ ಎಂಬ ಮಾಹಿತಿ ನೀಡಲಾಯಿತು.
Advertisement
ಸದ್ಯ ಜೇನು ಆರೋಗ್ಯಕ್ಕೆ ಒಳ್ಳೆಯ ಪದಾರ್ಥವಾಗಿರುವುದರಿಂದ ಮಧು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews