ಶಾಲಾ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ – 9 ಮಂದಿಗೆ ಗಾಯ, ಓರ್ವ ಮಹಿಳೆಯ ಸ್ಥಿತಿ ಗಂಭೀರ

Public TV
1 Min Read
Honey Bees attack school staff 9 injured in Hassan

ಹಾಸನ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಖಾಸಗಿ ಶಾಲೆಯ (School) ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ (Honey Bees Attack) ನಡೆಸಿದ ಘಟನೆ ಸಕಲೇಶಪುರ (Sakleshpura) ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.

ಹೆಜ್ಜೇನು ದಾಳಿಯಿಂದ 9 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ರೋಟರಿ ಶಾಲೆಯ ಸಿಬ್ಬಂದಿ ಶಾಲೆ ಮುಗಿಸಿಕೊಂಡು, ಮನೆಗೆ ತೆರಳುವಾಗ ಹೆಜ್ಜೇನು ದಾಳಿ ಮಾಡಿದೆ. ಇನ್ನೂ ಶಾಲೆಯ ಎದುರಿಗೆ ಇರುವ ಮನೆಯ ಮುಂದೆ ನಿಂತಿದ್ದ ವರ್ಗಿಸ್ ಎಂಬವರ ಮೇಲೂ ಹೆಜ್ಜೇನು ದಾಳಿ ನಡೆಸಿದೆ.

ಹೆಜ್ಜೆನು ದಾಳಿಯಿಂದಾಗಿ ಕೋಮಲ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಉಳಿದಂತೆ ಭಾಸ್ಕರ್, ಸೋಮಶೇಖರ್, ರವಿ, ಚೈತನ್ಯ, ಸಂಜಯ್, ಅಕ್ಷಯ್ ಮತ್ತು ವಿಶ್ವನಾಥ್ ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದು ಸಕಲೇಶಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಕಲೇಶಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article