ಹುಬ್ಬಳ್ಳಿ: ಕೇಶ್ವಾಪುರದ ಸೆಂಟ್ ಮೈಕಲ್ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರು ಮತ್ತು ಪೊಲೀಸರು ಸೇರಿ ಐವರ ಮೇಲೆ ಜೇನುಹುಳಗಳ ದಾಳಿಯಾಗಿದೆ.
Advertisement
ಕೆಲ ಕಿಡಿಗೆಡಿಗಳು ಮಾಡಿದ ಕೃತ್ಯದಿಂದ ಗಣಿತ ವಿಷಯ ಪರೀಕ್ಷೆ ಬರೆಯಲು ಬಂದಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಈಗ ಆಸ್ಪತ್ರೆ ಸೇರಿದ್ದಾರೆ. ಪರೀಕ್ಷೆ ಆರಂಭಕ್ಕೆ ಇನ್ನೂ ಕೆಲವೇ ಕ್ಷಣ ಬಾಕಿಯಿತ್ತು. ಈ ವೇಳೆ ಶಾಲಾ ಕಾಂಪೌಂಡ್ ಹೊರಗಡೆ ಮರದಲ್ಲಿ ಜೇನುನೊಣಗಳು ಗೂಡುಕಟ್ಟಿದ್ದವು. ಆದರೆ ಕಿಡಿಗೇಡಿಗಳು ಬಿಸಿದ ಕಲ್ಲಿನಿಂದ ಗೂಡು ಬಿಟ್ಟು ಶಾಲಾ ಆವರಣಕ್ಕೆ ನುಗ್ಗಿ ಏಕಾಏಕಿ ದಾಳಿ ಮಾಡಿವೆ. ಇದನ್ನೂ ಓದಿ: ಮಸೀದಿ, ದೇವಸ್ಥಾನ, ಚರ್ಚ್‍ಗಳಲ್ಲಿ ಜೋರಾಗಿ ಮೈಕ್ ಹಾಕಿದ್ರೆ ಧರ್ಮಗಳ ನಡುವೆ ಸಂಘರ್ಷ ಆಗುತ್ತೆ: ಈಶ್ವರಪ್ಪ
Advertisement
Advertisement
ಜೇನುದಾಳಿಯಿಂದ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕ, ಪಾಲಕರು ಮತ್ತು ಪೊಲೀಸರಿಗೂ ಸಹ ಗಂಭೀರ ಗಾಯಗಳಾಗಿವೆ. ಎಲ್ಲರಿಗೂ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.