LatestMain PostNational

75,000ರೂ. ನಗದು, ಚಿನ್ನಾಭರಣ ಪ್ರಯಾಣಿಕನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ

ನವದೆಹಲಿ: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಅನ್ನು ಆಟೋ ಚಾಲಕ ಮತ್ತೆ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆ ಬುಧವಾರ ನಡೆದಿದ್ದು, ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದ ಬಳಿ ಮರೆತುಹೋಗಿದ್ದ ಬ್ಯಾಗ್ ಅನ್ನು ಗಮನಿಸಿದ ಆಟೋ ಚಾಲಕ ವಿನೋದ್ ಯಾದವ್ ಆಗ್ರಾದ ಕ್ಯಾಂಟ್‍ನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇನ್ನೂ ಈ ಬ್ಯಾಗ್‍ನಲ್ಲಿ ಒಂದು ಜೊತೆ ಚಿನ್ನದ ಬಳೆಗಳು, ಒಂದು ಉಂಗುರ, ಒಂದು ಜೊತೆ ಕಾಲುಂಗುರ ಮತ್ತು ಬಟ್ಟೆಗಳ ಜೊತೆಗೆ 75,000ರೂ. ನಗದು ಇತ್ತು.

ಆಗ್ರಾ ಕ್ಯಾಂಟ್ ರೈಲ್ವೆ ನಿಲ್ದಾಣದ ಗೇಟ್‍ನ ಹೊರಗೆ ಟ್ರಾಲಿ ಬ್ಯಾಗ್ ಅನ್ನು ಗಮನಿಸದ ವಿನೋದ್ ಕಂಡು ಅದನ್ನು ಜಿಆರ್‍ಪಿಗೆ ಹಸ್ತಾಂತರಿಸಿವುದಾಗಿ ಆಗ್ರಾ ಕ್ಯಾಂಟ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಸುಶೀಲ್ ಕುಮಾರ್ ತಿಳಿಸಿದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೇರಿಕ್ಕೆ?

ಬ್ಯಾಗ್ ಮಾಲೀಕ ಹಸ್ರಾಸ್ ಜಿಲ್ಲೆಯ ಮುರ್ಸಾನ್‍ನ ನಿವಾಸಿ ಬಿರಿ ಸಿಂಗ್ ಆಗಿದ್ದು, ಭೋಪಾಲ್‍ನಿಂದ ಶ್ರೀಧಾಮ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗ್ರಾ ಕ್ಯಾಂಟ್‍ನಲ್ಲಿ ಬಂದಿಳಿದಿದ್ದರು. ಈ ವೇಳೆ ಬ್ಯಾಗ್ ಅನ್ನು ಮರೆತು ಹೋಗಿದ್ದರು. ಆದರೆ ಬ್ಯಾಗ್‍ನಲ್ಲಿದ್ದ ಬಿರಿ ಸಿಂಗ್ ಅವರ ಮೊಬೈಲ್ ನಂಬರ್ ಮೂಲಕ ಅವರನ್ನು ಸಂಪರ್ಕಿಸಿ, ಬ್ಯಾಗ್ ತೆಗೆದುಕೊಂಡು ಹೋಗುವಂತೆ ತಿಳಿಸಿಲಾಗಿತ್ತು. ನಂತರ ಬಿರಿ ಸಿಂಗ್ ಪೊಲೀಸ್ ಠಾಣೆಗೆ ಆಗಮಿಸಿ, ಬ್ಯಾಗ್ ಅನ್ನು ಪಡೆದರು. ಜೊತೆಗೆ ಬ್ಯಾಗ್‍ನಲ್ಲಿ ಬೆಲೆಬಾಳುವ ವಸ್ತು, ನಗದು ಎಲ್ಲ ಸುರಕ್ಷಿತವಾಗಿರುವುದನ್ನು ಕಂಡು ಸಂತಸಗೊಂಡು ಆಟೋ ಚಾಲಕನಿಗೆ ಧನ್ಯವಾದ ತಿಳಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಿಂಗಾಪುರದಲ್ಲೂ ಖಾತೆ ತೆರೆದ ಓಮಿಕ್ರಾನ್‌- ದಕ್ಷಿಣಾ ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು

ಈ ವಿಚಾರವಾಗಿ ಮಾತನಾಡಿದ ಆಟೋ ಚಾಲಕ ವಿನೋದ್ ಯಾದವ್ ಪ್ರಯಾಣಿಕರ ಟ್ರಾಲಿ ಬ್ಯಾಗ್ ಹಿಂದಿರುಗಿಸಿದ ನಂತರ ನನಗೆ ಬಹಳ ಸಂತೋಷವಾಗಿದೆ. ಪ್ರಯಾಣಿಕರ ಬ್ಯಾಗ್ ಹಿಂದಿರುಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button