ಹೈದರಾಬಾದ್: ನಗರದ ಹೊಂಡಾ ಜಾಜ್ ಮಾಲೀಕನಿಗೆ ಸಂಚಾರಿ ಪೊಲೀಸರು ಒಂದು ವರ್ಷದಲ್ಲಿ ಸುಮಾರು 1.82 ಲಕ್ಷ ರೂ. ದಂಡ ವಿಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಭಾರೀ ಮೊತ್ತದ ದಂಡ ವಿಧಿಸಲು ಪ್ರಮುಖ ಕಾರಣ ಕಾರು ಮಾಲೀಕ ಒಂದು ವರ್ಷದಲ್ಲಿ ಅಂದರೆ 2017 ಏಪ್ರಿಲ್ 4 ರಿಂದ 2018 ಮಾರ್ಚ್ 10 ರ ನಡುವೆ ಸುಮಾರು 127 ಬಾರಿ ವೇಗ ಮಿತಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಪ್ರತಿ ಬಾರಿಯೂ ಪೊಲೀಸರು ಕಾರು ಮಾಲೀಕನಿಗೆ ಇ-ಚಲನ್ ಪೋರ್ಟಲ್ ಮೂಲಕ ದಂಡ ವಿಧಿಸಿ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಮೂಲಗಳ ಪ್ರಕಾರ ನಗರದ ಹೊರ ವರ್ತುಲ ರಸ್ತೆಯು ಹೆಚ್ಚು ಅಪಘಾತ ಸಂಭವಿಸುವ ರಸ್ತೆಯಾಗಿದ್ದು, ಸಾಲು ಸಾಲು ಸರಣಿ ಅಪಘಾತ ಪ್ರಕರಣಗಳಿಂದಾಗಿ ರಸ್ತೆಯ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ನಿಂದ 100 ಕಿ.ಮೀ ಇಳಿಸಲಾಗಿತ್ತು. ಆದರೆ ಪ್ರತಿ ಬಾರಿ ಈ ಸ್ಥಳದಲ್ಲೇ ಹೋಂಡ ಜಾಜ್ ಕಾರು ಮಾಲೀಕ ಅತೀ ವೇಗದಿಂದ ಕಾರು ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದಾನೆ. ಇದರಿಂದ ಪ್ರತಿ ಬಾರಿ ದಂಡ ಪ್ರಮಾಣ 1,435 ರೂ. ಆಗಿದ್ದ ಹಿನ್ನೆಲೆಯಲ್ಲಿ ಈಗ ದಂಡದ ಮೊತ್ತ 1.82 ಲಕ್ಷ ರೂ. ಆಗಿದೆ.
Advertisement
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್ ಪೊಲೀಸ್ ಆಧಿಕಾರಿಯೊಬ್ಬರು, ಕಾರು ನೋಂದಣಿ ದಾಖಲಾತಿ ಸಮಯದಲ್ಲಿ ಕೊಟ್ಟ ಫೋನ್ ನಂಬರ್ ಗೆ ಪ್ರತಿ ಬಾರಿ ಉಲ್ಲಂಘನೆಯ ವಿಷಯವನ್ನು ತಕ್ಷಣ ಇ-ಚಲನ್ ಪೋರ್ಟಲ್ ಕಳುಹಿಸಲಾಗುತ್ತದೆ. ಈಗ ಈ ಕಾರು ಎಲ್ಲಿದೆ ಎಂದು ತಿಳಿದು ಬಂದಿಲ್ಲ ಆದರೆ ಎಲ್ಲ ಟೋಲ್ ಗೇಟ್‍ಗಳಿಗೆ ವಾಹನದ ಸಂಖ್ಯೆಯನ್ನು ನೀಡಿ ವಾಹನವನ್ನು ತಡೆ ಹಿಡಿಯುವಂತೆ ಆದೇಶಿಸುತ್ತೇವೆ ಹಾಗೂ ಆದಷ್ಟು ಬೇಗ ದಂಡವನ್ನು ಪಾವತಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!