CrimeDistrictsKarnatakaLatestLeading NewsMain PostUttara Kannada

ಚಿಕ್ಕ ಮಗುವಿನೊಂದಿಗೆ ಸಲಿಂಗಕಾಮ – ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ

ಕಾರವಾರ: ಪುಟ್ಟ ಗಂಡುಮಗುವಿನೊಂದಿಗೆ ರಾಕ್ಷಸತನ ಮೆರೆದು ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗೆ ಕಾರವಾರದ ಪೋಕ್ಸೋ ವಿಶೇಷ ನ್ಯಾಯಾಲಯ (POCSO Special Court) 20 ವರ್ಷ ಜೈಲು (Jail) ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದೆ.

ಚಿಕ್ಕ ಮಗುವಿನೊಂದಿಗೆ ಸಲಿಂಗಕಾಮ - ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿಣಿ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತಿದ್ದ ವನ್ನಳ್ಳಿಯ ಆರೋಪಿ ಖಾಸಿಂ (28) ಎಂಬಾತ ತಮ್ಮ ಪರಿಚಿತ ವ್ಯಕ್ತಿಯ 6 ವರ್ಷದ ಗಂಡುಮಗುವಿನ ಮೇಲೆ ದೈಹಿಕ ಸಂಭೋಗ ನಡೆಸಿ ರಾಕ್ಷಸತನ ಮೆರೆದಿದ್ದಾನೆ. ಆಟವಾಡುತಿದ್ದ ಸಮಯದಲ್ಲಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಈ ದೇಶದ ಗೃಹ ಸಚಿವರ ವಿರುದ್ಧವೇ ಮರ್ಡರ್ ಕೇಸ್ ಇದೆ – ಸಿದ್ದರಾಮಯ್ಯ

ಚಿಕ್ಕ ಮಗುವಿನೊಂದಿಗೆ ಸಲಿಂಗಕಾಮ - ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ

ಮಗುವು ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡು ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಕುಮಟಾ ಠಾಣೆಯಲ್ಲಿ ಮಾರ್ಚ್ 15 ರಂದು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಸಿಪಿಐ ತಿಮ್ಮಪ್ಪ ಹಾಗೂ ಪಿಎಸ್‌ಐ (PSI) ನವೀನ್ ಆರೋಪಿಯನ್ನು ಸಾಕ್ಷ್ಯಾಧಾರಗಳೊಂದಿಗೆ ಬಂಧಿಸಿ, ನ್ಯಾಯಾಲಯಕ್ಕೆ (Court) ಹಾಜರುಪಡಿಸಿದ್ದರು. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

court order law

ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಖಾಸಿಂಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button