ಬೆಂಗಳೂರು: ನಗರದಲ್ಲಿ ಟೆಕ್ಕಿ ಸಹೋದರಿಯರ ಹೋಮೋ ಸಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಿಬ್ಬರ ನಡುವೆ ಯಾವುದೇ ಸಂಬಂಧವೂ ಇಲ್ಲ, ಮದುವೆ ಕೂಡ ಆಗಿಲ್ಲ ಅಂತಾ ಯುವತಿ ಪಬ್ಲಿಕ್ ಟಿವಿಗೆ ಹೇಳಿದ್ದಾಳೆ.
ಅವರ ಅಪ್ಪ ಅಮ್ಮ ಹಿಂಸೆ ಕೊಡುತ್ತಾ ಇರೋದ್ರಿಂದ ಆಕೆ ನನ್ನ ಬಳಿ ಬಂದು ವಾಸ ಮಾಡ್ತಿದ್ದಾಳೆ. ಅಪ್ಪ ಅಮ್ಮನ ಹಿಂಸೆ ತಪ್ಪಿಸಿಕೊಳ್ಳುವ ಸಲುವಾಗಿ ಬಂದಿದ್ದಾಳೆ ಅಷ್ಟೇ. ನಾವು ಸಲಿಂಗಕಾಮಿಗಳಲ್ಲ. ನನ್ನ ಮೇಲೆ ಸೇಡು ತೀರಿಸಿಕೊಳ್ಳೊದಕ್ಕೆ ಈ ದೂರು ನೀಡಿದ್ದಾರೆ. ನಾನು ನನಗೆ ಕಂಫರ್ಟ್ ಆಗಿರೋದ್ರಿಂದ ಪ್ಯಾಂಟ್-ಟೀ ಶರ್ಟ್ ಹಾಕ್ತೀನಿ, ಬುಲೆಟ್ ಓಡಿಸ್ತೀನಿ. ಅದನ್ನು ಬಿಟ್ಟು ಬೇರೆ ಯಾವುದೇ ಬದಲಾವಣೆ ನನ್ನಲ್ಲಿ ಇಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಮತ್ತು ನನಗೆ ಕೊಲೆ ಬೆದರಿಕೆ ಹಾಕ್ತಿದ್ದಾರೆ ಅಂತಾ ಯುವತಿ ಹೇಳಿದ್ದಾಳೆ.
ಏನಿದು ಪ್ರಕರಣ?: ಸಹೋದರನ ಮಗಳು ಕಾವ್ಯಾ (ಹೆಸರು ಬದಲಾಯಿಸಲಾಗಿದೆ) ಬುಲೆಟ್ ಓಡಿಸ್ತಾಳೆ, ಕುಡಿತಾಳೆ, ಅವಳ ಹೋಲಿಕೆ ಕೂಡ ಗಂಡಸಿನಂತಿದೆ. ಗಂಡಸರ ರೀತಿ ಪ್ಯಾಂಟ್ ಶರ್ಟ್ ಹಾಕ್ತಾಳೆ, ಗಂಡಸಿನ ವರ್ತನೆ ಮಾಡೋ ಆಕೆಯ ಬಲೆಗೆ ನನ್ನ ಮಗಳು ಭವ್ಯಾ (ಹೆಸರು ಬದಲಾಯಿಸಲಾಗಿದೆ) ಬಿದ್ದಿದ್ದಾಳೆ. ಮಗಳ ಜೊತೆ ಸಲಿಂಗಕಾಮವನ್ನು ನಡೆಸುವುದು ಅಲ್ಲದೇ ನನ್ನ ಮಗಳನ್ನೇ ಮದ್ವೆ ಮಾಡಿಕೊಳ್ತೀನಿ ಎಂದು ಹೇಳಿದ್ದಾಳೆ ಎಂದು ಭವ್ಯಾಳ ತಂದೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ನನ್ನ ಮಗಳ ಮನಸ್ಸನ್ನು ಹಾಳು ಮಾಡಿ ಇಬ್ಬರೂ ಒಂದೇ ಮನೆಯಲ್ಲಿ ಸಂಸಾರ ಮಾಡ್ತಿದ್ದಾರೆ. ಇಬ್ಬರು ಜೊತೆಯಲ್ಲಿಯೇ ಇರೋದ್ರಿಂದ ಭವ್ಯಾ ಅವಳನ್ನು ಬಿಟ್ಟು ಬರುತ್ತಿಲ್ಲ. ನನ್ನ ಮಗಳನ್ನು ನನಗೆ ಕೊಡಿ ಅಂತ ದಿನ ಕಳೆದರೆ ಪೊಲೀಸ್ ಠಾಣೆ, ಕಚೇರಿಯಲ್ಲಿ ಮಗಳಿಗಾಗಿ ಭವ್ಯಳ ತಂದೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಭವ್ಯಾಳ ತಂದೆ ವನಿತಾ ಸಹಾಯವಾಣಿಗೆ ದೂರು ನೀಡಿದ್ದರು.
https://www.youtube.com/watch?v=rnGBVsHu3p0&spfreload=10