ನಕ್ಕಾಗ ಹಲ್ಲು ಎಲ್ಲರಿಗೂ ಕಾಣುತ್ತದೆ. ಹೆಚ್ಚನವರಿಗೆ ಹಳದಿ ಹಲ್ಲಿನ ಸಮಸ್ಯೆ ಕಾಡುತ್ತಿರುತ್ತದೆ. ಬಾಯಿ ತೆರೆದು ನಕ್ಕು ಮುಜುಗರಕ್ಕೆ ಒಳಗಾಗುವ ಎಷ್ಟೋ ಸಂದರ್ಭ ಎದುರಾಗಿರಬಹುದು. ಇಂತಹ ಹಳದಿ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಮನೆ ಮದ್ದುಗಳನ್ನು ಟ್ರೈ ಮಾಡಿದರೆ ಪಳ ಪಳ ಹೊಳೆಯುವ ಹಲ್ಲನ್ನು ಪಡೆದುಕೊಳ್ಳಬಹುದಾಗಿದೆ.
* 1 ಟೀ ಸ್ಪೂನ್ ಅಡುಗೆ ಸೋಡಾ, ಸ್ಪೂನ್ ನಿಂಬೆ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ತರಹ ಮಾಡಿಕೊಂಡು ಹಲ್ಲುಜ್ಜಿ ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಬೇಕು.
* ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ತುಂಡು ತೆಗೆದುಕೊಂಡು ಅದರ ಒಳಭಾಗದಿಂದ ನಿಮ್ಮ ಹಲ್ಲುಗಳ ಮೇಲೆ ಉಜ್ಜಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡುತ್ತಾ ಬರುವುದರಿಂದ ಹೊಳೆಯುವ ಹಲ್ಲು ನಿಮ್ಮದಾಗುತ್ತದೆ.
* ಹಲ್ಲುಜ್ಜುವ ಬ್ರಷ್ ಅನ್ನು ಒದ್ದೆ ಮಾಡಿ ಇದ್ದಿಲಿನ ಪುಡಿಯಲ್ಲಿ ಅದ್ದಿ. ಎರಡು ನಿಮಿಷಗಳ ಕಾಲ ವೃತ್ತಾಕಾರವಾಗಿ ಬ್ರಷ್ ಮಾಡಿ. ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನೂ ಓದಿ: ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ
* 4-5 ಬೇವಿನ ಎಲೆಗಳನ್ನು 1 ಕಪ್ ನೀರಿನಲ್ಲಿ ಕೆಲವು ನಿಮಿಷ ಕುದಿಸಿ. ನೀರು ಹೆಚ್ಚು ಬಿಸಿಯಾಗಲು ಬಿಡಬೇಡಿ. ಈ ದ್ರಾವಣವನ್ನು ತಣ್ಣಗಾಗಲು ಬಿಡಿ. ಹಲ್ಲುಜ್ಜುವ ಮೊದಲು ಅಥವಾ ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
* ಹಲ್ಲುಜ್ಜುವ ಬ್ರಷ್‍ಗೆ 1/8 ಟೀಸ್ಪೂನ್ ಅರಿಶಿನ ಪುಡಿಯನ್ನು ಸಿಂಪಡಿಸಿ, ಬ್ರಷ್ ಮಾಡಿ. ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆದು ಮತ್ತೆ ಮಾಮೂಲಿ ಟೂತ್‍ಪೆಸ್ಟ್‍ನೊಂದಿಗೆ ಬ್ರಷ್ ಮಾಡಿ. ಹೀಗೆ ಪ್ರತಿನಿತ್ಯ ಬ್ರಷ್ ಮಾಡುವುದರಿಂದ ನಿಮ್ಮ ಹಲ್ಲು ಹಾಲಿನ ಬಣ್ಣಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.