ಸೂರ್ಯದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಈ ಹಬ್ಬ ಬಂದ ತಕ್ಷಣ ನಮ್ಮೆಲ್ಲರಿಗೂ ಮೊದಲು ನೆನಪಾಗುವುದೇ ಎಳ್ಳು-ಬೆಲ್ಲ. ಪ್ರತಿ ವರ್ಷ ಮಕರ ಸಂಕ್ರಾತಿ ಹಬ್ಬದಂದು ಮನೆಯಲ್ಲಿರುವ ಹೆಣ್ಣು ಮಕ್ಕಳು ಅಕ್ಕ-ಪಕ್ಕದ ಮನೆಯವರಿಗೆ, ಪರಿಚಯಸ್ಥರಿಗೆ ಮತ್ತು ಆತ್ಮೀಯರಿಗೆ ಎಳ್ಳು ಬೆಲ್ಲ ಹಂಚುವುದು ಸಂಪ್ರಾದಾಯ. ಈ ಬಾರಿ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಅಂಗಡಿಯಿಂದ ಎಳ್ಳು-ಬೆಲ್ಲ ತರುವ ಬದಲು ಮನೆಯಲ್ಲೇ ಎಳ್ಳು-ಬೆಲ್ಲ ಯಾವ ರೀತಿ ತಯಾರಿಸಬಹುದು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ನೋಡೋಣ.
Advertisement
ಬೇಕಾಗುವ ಸಾಮಗ್ರಿಗಳು:
ಹುರಿದ ಬೇಳೆ – 1 ಕಪ್
ಕಚ್ಚಾ ಕಡಲೆಕಾಯಿ – 1 ಕಪ್
ಸಣ್ಣದಾಗಿ ಕತ್ತರಿಸಿದ ಒಣ ಕೊಬ್ಬರಿ -1 ಕಪ್
ಸಣ್ಣದಾಗಿ ಕತ್ತರಿಸಿದ ಬೆಲ್ಲ – 1 ಕಪ್
ಎಳ್ಳು – 1/2 ಕಪ್
Advertisement
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಕಡಾಯಿ ತೆಗೆದುಕೊಂಡು ಸ್ಟವ್ ಮೇಲೆ ಇಡಿ. ಅದು ಬಿಸಿ ಆಗುತ್ತಿದ್ದಂತೆ ಸಿಪ್ಪೆಯೊಂದಿಗೆ ಕಡಲೆಕಾಯಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ.
* ಈಗ ಅದು ತಣ್ಣಗಾದ ಬಳಿಕ ಒಂದು ಬಟ್ಟೆ ತೆಗೆದುಕೊಂಡು ಹುರಿದ ಕಡಲೆಕಾಯಿ ಹಾಕಿ. ಬಟ್ಟೆಯನ್ನು ಕಟ್ಟಿ, ಒಂದು ಕೈಯಿಂದ ಬಿಗಿಯಾಗಿ ಹಿಡಿದು ಮತ್ತೊಂದು ಕೈಯಿಂದ ಕಡಲೆಬೀಜದ ಸಿಪ್ಪೆ ಹೋಗುವವರೆಗೂ ಉಜ್ಜಿ.
* ನಂತರ ಕೊಬ್ಬರಿಯ ಮೇಲ್ಭಾಗದಲ್ಲಿರುವ ಕಂದು ಪದರ ತೆರೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದನ್ನು ಕೂಡ ಹುರಿದುಕೊಳ್ಳಿ.
* ಇದಾದ ಬಳಿಕ ಬೆಲ್ಲವನ್ನು ಕೂಡ ಕೊಬ್ಬರಿ ಗಾತ್ರದಲ್ಲಿಯೇ ಸಣ್ಣ ಪೀಸ್‌ಗಳಾಗಿ ಮಾಡಿಟ್ಟುಕೊಳ್ಳಿ.
* ಈಗ ಎಳ್ಳನ್ನು ಹುರಿದು, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿದರೆ ಎಳ್ಳು-ಬೆಲ್ಲ ಸವಿಯಲು ಸಿದ್ಧ.