ಕಡಲೆಕಾಯಿ ಅಥವಾ ನೆಲಗಡಲೆಯನ್ನು ಅಡುಗೆಯಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಚಟ್ನಿ, ಲಘು ಆಹಾರ ಸೇರಿದಂತೆ ನೆಲಗಡಲೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಟೀ ಟೈಮ್‌ನಲ್ಲಿ ಕುರುಕಲು ತಿಂಡಿಯಾಗಿಯೂ ನೆಲಗಡಲೆಯನ್ನು ಸವಿಯಬಹುದು. ಅಂಗಡಿಗಳಲ್ಲಿ ಸಿಗುವ ನೆಲಗಡಲೆ ಮಸಾಲೆಯನ್ನು ನಾವು ತಿಂದಿರುತ್ತೇವೆ. ಇಂದು ನಾವು ನೆಲಗಡಲೆ ಮಸಾಲಾ (Peanut Masala) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಕಡಲೆ ಹಿಟ್ಟು – ಅರ್ಧ ಕಪ್
ಅಕ್ಕಿ ಹಿಟ್ಟು – 2 ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ಅಡುಗೆ ಸೋಡಾ – ಚಿಟಿಕೆ
ಉಪ್ಪು – ಅರ್ಧ ಟೀಸ್ಪೂನ್
ನೆಲಗಡಲೆ – 2 ಕಪ್
ಎಣ್ಣೆ – 2 ಟೀಸ್ಪೂನ್
ನೀರು – 3 ಟೀಸ್ಪೂನ್
ಎಣ್ಣೆ – ಡೀಪ್ ಫ್ರೈಗೆ
ಚಾಟ್ ಮಸಾಲ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಾರ್ನ್ ಫ್ಲೋರ್ ತೆಗೆದುಕೊಳ್ಳಿ.
* ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅಡುಗೆ ಸೋಡಾ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ನೆಲಗಡಲೆ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ 2 ಟೀಸ್ಪೂನ್ ನೀರು ಸೇರಿಸಿ ಮಿಕ್ಸ್ ಮಾಡಿ. ಕಡಲೆಕಾಯಿಗೆ ಹಿಟ್ಟು ಚೆನ್ನಾಗಿ ಲೇಪಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬೇಕೆಂದರೆ 1-2 ಟೀಸ್ಪೂನ್ ಹೆಚ್ಚಿನ ನೀರನ್ನು ಹಾಕಿ ಮಿಕ್ಸ್ ಮಾಡಿ.
* ಮಿಶ್ರಣವನ್ನು 5 ನಿಮಿಷಗಳ ಕಾಲ ಹಾಗೆಯೇ ಮುಚ್ಚಿ ಇಟ್ಟು, ಬಳಿಕ 1 ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದು ಬ್ರೆಡ್ ದೋಸೆ – ಒಮ್ಮೆ ಟ್ರೈ ಮಾಡಿ
Advertisement
* ಈಗ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪೇ ಕಡಲೆ ಕಾಯಿಗಳನ್ನು ಡೀಪ್ ಫ್ರೈ ಮಾಡಿ.
* ಮಧ್ಯಮ ಉರಿಯಲ್ಲಿ ಫ್ರೈ ಮಾಡುವಾಗ ಎಣ್ಣೆಯಲ್ಲಿ ನೊರೆ ಕಡಿಮೆಯಾಗಿ, ಕಡಲೆಗಳು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಅದನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ನೆಲಗಡಲೆ ಮೇಲೆ ಚ್ಯಾಟ್ ಮಸಾಲಾವನ್ನು ಸಿಂಪಡಿಸಿ.
* ಕುರುಕಲಾದ ನೆಲಗಡಲೆ ಮಸಾಲಾ ಇದೀಗ ತಯಾರಾಗಿದ್ದು, ಇದನ್ನು 1 ತಿಂಗಳ ಕಾಲ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ, ಬೇಕೆಂದಾಗ ಆನಂದಿಸಬಹುದು.