ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ.
ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವರು. ಇವರು ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪದವೀಧರಾಗಿದ್ದಾರೆ. ಜೊತೆಗೆ ವೆಬ್ ಡೆವಲಪರ್ ಕೂಡ ಆಗಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದೇ ಹುಡುಕಿ ಹುಡುಕಿ ಬೇಸರವಾಗಿ, ನೆಲಸಲು ಮನೆಯೂ ಇಲ್ಲದೇ ಕೊನೆಗೆ ನಾಮ ಘಲಕವೊಂದನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಿದ್ದಾರೆ.
Advertisement
ನಾಮಫಲಕದಲ್ಲಿ “Homeless, hungry 4 success, take a resume.” (ಮನೆ ಇಲ್ಲದೇ ಇದ್ದರೂ ಯಶಸ್ಸಿನ ಹಸಿವು ಇದೆ. ರೆಸ್ಯೂಮ್ ನೋಡಿ) ಎಂಬುದಾಗಿ ಬರೆದು ಕುತ್ತಿಗೆಗೆ ಹಾಕಿಕೊಂಡು ನಿಂತಿದ್ದರು. ಕ್ಯಾಸೆರೆಜ್ ನಿಂತಿದ್ದ ಫೋಟೋವನ್ನು ಒಬ್ಬರು ತೆಗೆದುಕೊಂಡು ತಮ್ಮ ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಜೊತೆಗೆ “ಈ ಯುವಕ ಮನೆ ಇಲ್ಲದಿದ್ದರೂ ಹಣದ ಬದಲು ನನ್ನ ರೆಸ್ಯೂಮ್ ನೋಡಿ ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ ಸಿಲಿಕಾನ್ ವ್ಯಾಲಿಯಲ್ಲಿರುವ ಯಾರದರೂ ಅವರಿಗೆ ಸಹಾಯ ಮಾಡಿದರೆ ಅದು ನಿಜಕ್ಕೂ ಅದ್ಭುತವಾಗಿರುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟಿಗರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ತಮಗೆ ಗೊತ್ತಿರುವ ಕಡೆಗಳಲ್ಲಿ ವಿಚಾರಿಸುವುದಾಗಿ ಹೇಳಿದ್ದಾರೆ. ಕೊನೆಗೆ ಇದರಿಂದ ಅವರಿಗೆ ಸುಮಾರು 200 ಸಂಸ್ಥೆಗಳಿಂದ ಕೆಲಸದ ಆಫರ್ ಗಳು ಬಂದಿದೆ. ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಕ್ಯಾಸೆರೆಜ್ ಅವರನ್ನು ಕೆಲಸಕ್ಕಾಗಿ ಆಹ್ವಾನಿಸಿವೆ.
Advertisement
ಜುಲೈ 27 ರಂದು ಈ ಪೋಸ್ಟ್ ಮಾಡಿದ್ದು, ಈವರೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕಿಂತ ಜನರು ಈ ಪೋಸ್ಟಿಗೆ ರೀಟ್ವೀಟ್ ಮಾಡಿದ್ದಾರೆ.
ನಾನು ಈ ಮೊದಲು ಆಸ್ಟಿನ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಉತ್ತಮ ಉದ್ಯೋಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಬಂದು ಅವಕಾಶಕ್ಕಾಗಿ ಹುಡುಕುತ್ತಿದ್ದೆ. ನಾನು ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನಾನು ಕೆಲಸವನ್ನು ಮಾತ್ರ ಬಯಸುತ್ತಿದ್ದೆ. ಈಗ ಕೆಲಸ ಸಿಕ್ಕಿದೆ. ನನ್ನ ಬಗ್ಗೆ ಪೋಸ್ಟ್ ಮಾಡಿದವರಿಗೆ ಧನ್ಯವಾದಗಳು ಎಂದು ಕ್ಯಾಸೆರೆಜ್ ಹೇಳಿದ್ದಾರೆ.
https://twitter.com/jaysc0/status/1022995030015766528