ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಸಂದರ್ಭದಂದು ಕೆ.ಆರ್.ಜಿ ನಿರ್ಮಾಣ ಸಂಸ್ಥೆಯ ನಿರ್ಮಾಪಕ ಹಾಗೂ ಹೊಂಬಾಳೆ ಫಿಲ್ಮ್ಸ್ ನ ಕಾರ್ತಿಕ್ ಗೌಡ ರಮ್ಯಾ ಜೊತೆಗಿನ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ‘ಹ್ಯಾಪಿ ಬರ್ತಡೇ ದಿವ್ಯಾಸ್ಪಂದನ’ ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ‘ಥ್ಯಾಂಕ್ಯೂ K’ ಎಂದು ಬರೆದಿದ್ದಾರೆ. ಕಾರ್ತಿಕ್ ಗೌಡ ಅವರು ತಮ್ಮ ನಿರ್ಮಾಣದ ಸಂಸ್ಥೆಯಿಂದ ತಯಾರಾಗುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೂಲಕ ರಮ್ಯಾ ಅವರನ್ನು ವಾಪಸ್ಸು ಸಿನಿಮಾ ರಂಗಕ್ಕೆ ಕರೆತಂದಿದ್ದಾರೆ. ಅಲ್ಲದೇ, ರಮ್ಯಾ ನಿರ್ಮಾಣ ಮಾಡುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ಇದೇ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಮೂಲಕ ವಿತರಣೆ ಆಗಲಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ
ಕಾರ್ತಿಕ್ ಗೌಡ ನಿರ್ಮಾಣದ, ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಥಳಕ್ಕೂ ರಮ್ಯಾ ಅವರು ಹೋಗಿದ್ದರು. ಅಲ್ಲಿಂದ ಕೆ.ಆರ್.ಜಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ.
ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ.