ವೆಲ್ಲಿಂಗ್ಟನ್: ಐರಿಶ್ ಮಹಿಳೆಯೊಬ್ಬರು ಗಂಡನನ್ನು ಮಾರಾಟಕ್ಕಿಟ್ಟು, ಎಕ್ಸ್ಚೇಂಜ್ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಐರಿಶ್ ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ವೆಬ್‍ನಲ್ಲಿ ‘ಮಾರಾಟ’ ಮಾಡುತ್ತಿದ್ದು, ಇವರನ್ನು ಖರೀದಿಸಿದ ನಂತರ ಯಾವುದೇ ರೀತಿಯಲ್ಲಿ ಎಕ್ಸ್ಚೇಂಜ್ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಪತಿಯ ಸಂಪೂರ್ಣ ವಿವರವಿದ್ದು, ನನ್ನ ಪತಿಯ ಹೆಸರು ಜಾನ್, ಎತ್ತರ 6.1, 37 ವರ್ಷ, ಕೃಷಿಕ, ಶೂಟಿಂಗ್ ಮತ್ತು ಮೀನುಗಾರಿಕೆ ಸಹವರ್ತಿ ಎಂದು ಬರೆದಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಏನಿದು ವಿಚಿತ್ರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಜಾನ್‍ನನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!
ಕಾರಣವೇನು?
ಐರಿಶ್ ಮಹಿಳೆ ಲಿಂಡಾ ಮ್ಯಾಕ್‍ಅಲಿಸ್ಟರ್ ಟ್ರೇಡ್ ಮಿ ಎಂಬ ವೆಬ್ ನಲ್ಲಿ ಪತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಜಾನ್ ಮ್ಯಾಕ್‍ಅಲಿಸ್ಟರ್, ನನ್ನನ್ನು ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮೀನುಗಾರಿಕೆ ಮಾಡಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎಂದು ಬರೆದುಕೊಂಡು ಜಾಹೀರಾತು ಕೊಟ್ಟಿದ್ದಾರೆ.
ಈ ಪಟ್ಟಿಯಲ್ಲಿ ಲಿಂಡಾ, ಜಾನ್ ಬಗ್ಗೆ ಪೂರ್ಣ ವಿವರವನ್ನು ಕೊಟ್ಟಿದ್ದಾರೆ. ಇವರಿಗೆ ಶೂಟಿಂಗ್ ಮತ್ತು ಮೀನುಗಾರಿಕೆಯ ಹಲವು ಮಾಲೀಕರ ಪರಿಚಯವಿದೆ. ಆದರೆ ನೀವು ಇವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ನಿಷ್ಠರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜಾನ್ ಅವರನ್ನು ಖರೀದಿಸಿದ ಮೇಲೆ ಯಾವುದೇ ರಿಟನ್ರ್ಸ್ ಅಥವಾ ವಿನಿಮಯವಿಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.
ಜಾನ್ ಹೆಚ್ಚು ಕೆಲಸದ ಕಡೆಯೇ ಗಮನ ಕೊಡುವುದು ನನ್ನನ್ನು ಕಾಡುತ್ತಿದೆ. ಮಕ್ಕಳಿಗೆ ರಜೆ ಇದ್ದಾಗಲೂ, ಮನೆಯಲ್ಲಿ ಮಲಗಿದ್ದಾಗಲೂ ಅವರು ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಜಾಹೀರಾತಿನಲ್ಲಿ ವಿವರಿಸಿದ್ದಾರೆ. ದಂಪತಿ 2019 ರಲ್ಲಿ ಐರ್ಲೆಂಡ್‍ನಲ್ಲಿ ವಿವಾಹವಾದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಜಾನ್ ಅವರಿಗೆ ವಿಷಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೆ ಜಾನ್ ಸ್ನೇಹಿತರು, ನಿನ್ನನ್ನು ಲಂಡಾ ಹರಾಜಿಗೆ ಇಟ್ಟಿದ್ದಾಳೆ ಎಂದು ಜಾನ್‍ಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಾನ್, ಏನಿಂದು ತಮಾಷೆ ಎಂದು ನಕ್ಕಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.
ಲಿಂಡಾ ಅವರ ಪಟ್ಟಿಯಲ್ಲಿ ಜಾನ್ ಬಗ್ಗೆ ಪೂರ್ಣ ವಿವರವಿದ್ದು, ಬಿಡ್ಡಿಂಗ್ ಕೆಲವೇ ಗಂಟೆಗಳಲ್ಲಿ 5,000 ರೂ. ಗೆ ಏರಿತು. ಖರೀದಿದಾರರು ತಮ್ಮ ಗಂಡನಾಗಬಹುದಾದ ಜಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದರು. ಜಾನ್ ಅವರಿಗೆ ಯಾವುದದರೂ ದುರ್ಗುಣಗಳಿದೆಯಾ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಲಿಂಡಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ
ಲಿಂಡಾ ಅವರು ಹರಾಜು ವೆಬ್‍ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಪೋಸ್ಟ್ ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರೇಡ್ ಮಿ ಸಿಬ್ಬಂದಿ, ಸಂಗಾತಿಯನ್ನೆ ಮಾರಾಟಕ್ಕೆ ಇಟ್ಟಿದ್ದು ಇದೇ ಮೊದಲಬಾರಿ. ನಮಗೂ ಇದು ವಿಚಿತ್ರ ಎನ್ನಿಸಿದೆ. ನಾವು ಜನರ ಮಸ್ತಿ-ಮೋಜನ್ನು ಇಷ್ಟಪಡುತ್ತೇವೆ. ಟ್ರೇಡ್ ಮಿ ಮೂಲಕ ಜನರು ಉತ್ತಮ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ