ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಶಂಕಿತ ಮಹಿಳೆಯೊಬ್ಬರು ಗೌರಿಬಿದನೂರು ನಗರದ ಮನೆಯಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದರು.
ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ #Covid19 ಸೋಂಕಿತ ವ್ಯಕ್ತಿಯೊಬ್ಬರು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇವರು ಮಧುಮೇಹ, ಎದೆನೋವು ಹಾಗೂ Hip Fracture ನಿಂದ ಬಳಲುತ್ತಿದ್ದರು. ಮರಣದ ಕಾರಣ ಏನೆಂದು ಪರೀಕ್ಷಾ ವರದಿಗಳು ಬಂದ ನಂತರವೇ ಖಚಿತವಾಗಲಿದೆ.
— B Sriramulu (@sriramulubjp) March 25, 2020
ಆಸ್ಪತ್ರೆಗೆ ದಾಖಲಾದ ನಂತರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆಗೆ ಸ್ಯಾಂಪಲ್ ಗಳನ್ನ ಕಲೆಕ್ಟ್ ಮಾಡಿಕೊಂಡಿದ್ದು. ವರದಿ ನಂತರವಷ್ಟೇ ಕೊರೊನಾ ಸೋಂಕು ದೃಢಪಡಲಿದೆ.
ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ಮರಳಿ ಮಗನ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ನಿನ್ನೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಮಹಿಳೆ ಮೃತಪಡಲು ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಆಕೆಗೆ ಕೊರೊನಾ ಸೋಂಕು ಇರುವುದು ಇನ್ನೂ ದೃಢಪಟ್ಟಿಲ್ಲ. ಆದರೂಐ ನಾವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇವರು ಗೌರಿಬಿದನೂರಿನ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಂದ ನಿನ್ನೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
— B Sriramulu (@sriramulubjp) March 25, 2020