ನವದೆಹಲಿ: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಶುಕ್ರವಾರ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಗೃಹ ಇಲಾಖೆಯ ಜಾಲತಾಣವನ್ನು ರಕ್ಷಣಾ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದು, ವೆಬ್ಸೈಟ್ಗೆ ಮಾಡಬೇಕಾದ ಎಲ್ಲಾ ಸೆಕ್ಯೂರಿಟಿ ಆಪ್ ಗ್ರೇಡ್ಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರದ ಪರ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಗೃಹ ಇಲಾಖೆಯ ವೆಬ್ಸೈಟ್ ತೆರೆದ ವೇಳೆ ನೀವು ವಿನಂತಿಸಿದ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅಡಚಣೆಗಾಗಿ ಕ್ಷಮಿಸಿ, ಶೀಘ್ರದಲ್ಲಿಯೇ ಸೇವೆಯು ಪುನಾರಂಭವಾಗಲಿದೆ ಎಂಬ ಬರಹ ಕಾಣಿಸುತ್ತಿದೆ. ಇಲಾಖೆ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ ಇಲಾಖೆಯ ಜಾಲತಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಭದ್ರತಾ ವ್ಯವಸ್ಥೆಯನ್ನು ನವೀಕರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Action is initiated after the hacking of MoD website ( https://t.co/7aEc779N2b ). The website shall be restored shortly. Needless to say, every possible step required to prevent any such eventuality in the future will be taken. @DefenceMinIndia @PIB_India @PIBHindi
— Nirmala Sitharaman (@nsitharaman) April 6, 2018
Advertisement
ಈ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ರಕ್ಷಣಾ ಇಲಾಖೆ ವೆಬ್ಸೈಟ್ ಹ್ಯಾಕ್ ಆದ ಬಳಿಕ ಹೆಚ್ಚುವರಿ ಮುನ್ನೆಚ್ಚರಿಕೆಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಶೀಘ್ರವೇ ವೆಬ್ಸೈಟ್ ಪುನಾರಂಭಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.