ತುಮಕೂರು: ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಕೋಲಾಹಲ ಎಬ್ಬಿಸಿದೆ. ಈ ನಡುವೆ ಗೃಹ ಸಚಿವ ಪರಮೇಶ್ವರ್ (G Parameshwar) ಬಾಯಲ್ಲಿ ರಾಜೀನಾಮೆ ಮಾತು ಬಂದಿದ್ದು, ಕಾರ್ಯಕರ್ತರೇ ವಿಚಲಿತರಾಗಿದ್ದಾರೆ.
Advertisement
ಹೌದು. ತುಮಕೂರಿನ (Tumkur) ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದ್ದಕ್ಕೆ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ನಾಡ ಬಾಂಬ್ ಸ್ಫೋಟ – ವಿದ್ಯಾರ್ಥಿಯ ಅಂಗೈ ಛಿದ್ರ
Advertisement
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸಿನ ಆಕಾಂಕ್ಷೆಯಂತೆ ಸ್ಪಂಧಿಸಲು ಆಗುತ್ತಿಲ್ಲ. ನೀವು ಹೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಅಂತ ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
Advertisement
Advertisement
ನಿಮಗೆಲ್ಲ ನಿರಾಸೆಯಾಗಿರಬಹುದು ನಿಮ್ಮ ಕೈಗೆ ಸಿಗೋದಿಲ್ಲ, ಪಂಚಾಯಿತಿಗೆ ಬರೋದಿಲ್ಲ, ನಮನ್ನ ಮಾತಾಡಿಸೋದಿಲ್ಲ. ಇದೆಲ್ಲಾ ನಮಗೂ ಅನಿಸುತ್ತೆ ನಿಮಗೂ ಅನಿಸುತ್ತೆ. ಆದರೆ ಸಮಯ ನನ್ನ ಕೈಯಲ್ಲಿ ಇಲ್ಲ. ನೀವೆಲ್ಲಾ ದೊಡ್ಡ ಮನುಸ್ಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ರೆ ನಾಳೇನೆ ರಾಜೀನಾಮೆ ಕೊಡುತ್ತೇನೆ. ಆಗ ನಾನು ನಿಮ್ಮ ಜೋತೆಯಲ್ಲಿ ಇರುತ್ತೆನೆ ಎಂದು ಹೇಳಿದ್ದಾರೆ. ಇದರಿಂದ ವಿಚಲಿತರಾದ ಕಾರ್ಯಕರ್ತರು ಹಾಗೂ ʻಕೈʼ ಮುಖಂಡರು ರಾಜೀನಾಮೆ ಕೊಡಬೇಡಿ ಎಂದು ಕೂಗಿದ್ದಾರೆ.