ಬೆಂಗಳೂರು: ನಟ ದರ್ಶನ್ (Actor Darshan) ಕೇಸ್‍ನಲ್ಲಿ ಯಾರನ್ನೂ ರಕ್ಷಣೆ ಮಾಡುವುದಾಗಲಿ ಅಥವಾ ಮೃದು ಧೋರಣೆ ತೋರಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಚಿತ್ರದುರ್ಗದ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟ ವಿಚಾರ ನಿಮಗೆ ಹೇಗ್ರಿ ಗೊತ್ತಾಯ್ತು? ಅಂತಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ? ಮುಂದುವರಿದು, ತನಿಖೆ ನಡೆಯುತ್ತಿದೆ. ಬಹಿರಂಗವಾಗಿ ನಾವು ಏನನ್ನೂ ಹೇಳಲು ಆಗಲ್ಲ. ತನಿಖೆಯ ವರದಿ ಬಂದಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಸಿಎಂ ಕೂಡ ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಸ್ಟಡಿಯಲ್ಲಿರುವ ʼಗಜ’ನಿಗೆ ಕರಗಿದ ಗತ್ತು- ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!
ನಾವು ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಪೊಲೀಸ್ ತನಿಖೆಯ ಟೈಮ್ ಬಾಂಡ್ ಅವರಿಗೆ ಬಿಟ್ಟಿದ್ದು. ಆಡಳಿತಾತ್ಮಕವಾಗಿ ಗಿರೀಶ್ ನಾಯ್ಕ್, ತನಿಖಾ ಅಧಿಕಾರಿಗಳ ಬದಲಾವಣೆ ಸೇರಿದಂತೆ ಸಮರ್ಥವಾಗಿರುವ ಅಧಿಕಾರಿಗಳನ್ನು ತನಿಖೆಗೆ ನಿಯೋಜಿನೆ ಮಾಡಲಾಗುತ್ತದೆ. ಇದನ್ನು ಪೊಲೀಸ್ ಇಲಾಖೆಯೆ ಮಾಡಿಕೊಳ್ಳಲಿದ್ದು, ನಾವ್ಯಾರು ಕೂಡ ಈ ಬಗ್ಗೆ ಸೂಚನೆ ನೀಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಮನೆ ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ. ಸೋಮವಾರ ಬಕ್ರೀದ್ ಹಬ್ಬ ಹಾಗೂ ಬಿಜೆಪಿ ಪ್ರತಿಭಟನೆ ಇದೆ ಎಂದು ಮುಂದಕ್ಕೆ ಹಾಕಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ದಂಗೆ ಏಳಿ ಅಂತಾರೆ, ಕೇಂದ್ರ ಸಚಿವ ಆಡೋ ಮಾತಾ?: ಸಿಎಂ ಸಿಡಿಮಿಡಿ