ಬೆಂಗಳೂರು: ನಟ ದರ್ಶನ್ ಜಾಮೀನು ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ (Supreme Court) ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ಮಾಡ್ತೀವಿ ಅಂತ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
Advertisement
ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ (Darshan) ಜಾಮೀನು ಕೇಸ್ ವಿಚಾರಣೆಗೆ ಬರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಏನ್ ತೀರ್ಪು ಬರುತ್ತೋ ನೋಡೋಣ. ನಾವು ನಮ್ಮ ಕೆಲಸ ಮಾಡಿದ್ದೇವೆ. ಪೊಲೀಸರು ದಾಖಲಾತಿಗಳ, ಮಾಹಿತಿಗಳನ್ನು ಲಾಯರ್‌ಗಳ ಮೂಲಕ ಸುಪ್ರೀಂ ಕೋರ್ಟ್‌ಗೆ ಕೊಟ್ಟಿರುತ್ತಾರೆ. ಕೋರ್ಟ್ ನಲ್ಲಿ ಏನ್ ತೀರ್ಮಾನ ಬರುತ್ತೆ ಅ ತೀರ್ಮಾನದ ಆಧಾರದಲ್ಲಿ ಮುಂದುವರೆಯುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಬಲಿ – ಗೃಹ ಸಚಿವರಿಗೆ ಮಾಂಗಲ್ಯಸರ ಪೋಸ್ಟ್ ಮಾಡಿದ ಮೃತನ ಪತ್ನಿ
Advertisement
Advertisement
ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಷಯ ನನಗೆ ಗೊತ್ತಿಲ್ಲ:
ಇನ್ನೂ ಬಿಜೆಪಿ ನಾಯಕ ಶ್ರೀರಾಮುಲು (Sriramulu) ಕಾಂಗ್ರೆಸ್‌ಗೆ ಸೇರ್ಪಡೆ ಆಗೋ ವಿಷಯದ ಬಗ್ಗೆ ಮಾಹಿತಿ ಇಲ್ಲ ಅಂತ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ
Advertisement
ಶ್ರೀರಾಮುಲುರನ್ನ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಡಿ.ಕೆ ಶಿವಕುಮಾರ್ (DK Shivakumar) ಪ್ರಯತ್ನ ಮಾಡ್ತಿದ್ದಾರೆ ಎಂಬ ಎಂಬ ಜನಾರ್ದನ ರೆಡ್ಡಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮುಲು ಕಾಂಗ್ರೆಸ್ ಸೇರ್ಪಡೆ ಆಗೋ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ. ಬಿಜೆಪಿ ಪಕ್ಷದಲ್ಲಿ ಅವೆಲ್ಲ ಗಲಾಟೆ ಆಗ್ತಿದೆ. ನಮ್ಮಲ್ಲಿ ಅದರ ಬಗ್ಗೆ ಚರ್ಚೆಗಳು ಆಗಿಲ್ಲ. ಅಂತಹ ಪ್ರಸ್ತಾಪ ಕೂಡ ನಮ್ಮಲ್ಲಿ ಆಗಿಲ್ಲ. ಸತೀಶ್ ಜಾರಕಿಗಹೊಳಿ ಹೆಸರು ಪ್ರಸ್ತಾಪ ಆಗಿರೋ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಲೋಕಸಭೆ ಚುನಾವಣೆ ವೇಳೆ ಶ್ರೀರಾಮುಲು ಕರೆ ತರೋ ಪ್ರಯತ್ನ ಆಗಿತ್ತು ಅನ್ನೋ ಬಗ್ಗೆ ನನಗೆ ಗೊತ್ತಿಲ್ಲ. ಅದಕ್ಕೆ ಕೆಪಿಸಿಸಿ ಅಧ್ಯಕ್ಷರು ಉತ್ತರ ಕೊಡ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ಅಧರ್ಮದ ಜಗತ್ತನ್ನು ತೊರೆಯುತ್ತಿದ್ದೇನೆ, ನನ್ನನ್ನು ಹುಡುಕಬೇಡಿ – ಪತ್ರ ಬರೆದು ಬಿಕಾಂ ವಿದ್ಯಾರ್ಥಿ ನಾಪತ್ತೆ