ರಾಯಚೂರು: ಪ್ರಿಯಾಂಕ್ ಖರ್ಗೆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸರ್ಕಾರದಲ್ಲಿ ಉದ್ಯೋಗ ಮಾಡಬೇಕಾದ್ರೆ ಮಂಚ ಏರಬೇಕು ಅನ್ನೋ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ತಿರುಗೇಟು ನೀಡಿದ ಅವರು, ಪ್ರಿಯಾಂಕ್ ಖರ್ಗೆ ಪ್ರಚಾರ ಖರ್ಗೆಯಾಗಿದ್ದಾರೆ. ಪ್ರಚಾರಕ್ಕಾಗಿ ಏನೇನೋ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಎಸ್‍ಐ ಹಗರಣದಲ್ಲಿ ತಮಗೆ ಏನು ಗೊತ್ತಿದೆ ಅಂತ ದಾಖಲಾತಿ ಕೇಳಿದರೆ ಓಡಿ ಹೋದರು ಎಂದು ವ್ಯಂಗ್ಯವಾಡಿದ್ದಾರೆ.
ನಂತರ, ಹರ್ ಘರ್ ತಿರಂಗದಿಂದ ಪ್ರತಿಯೊಬ್ಬರು ಹೆಮ್ಮೆಯ ಪ್ರಜೆಗಳಾಗಲಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಹಿರಿಯರ ನೆನಪು ಮಾಡಿಕೊಳ್ಳುವಂತದ್ದು, ಎಲ್ಲದರ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಚಾಳಿ. ಕಾಂಗ್ರೆಸ್‍ನವರು ಧರ್ಮದ ಆಧಾರದ ಮೇಲೆ ದೇಶ ಹೊಡೆದಿದ್ದಾರೆ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‍ನವರಿಗೆ ನಾಡಿನ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆ ಇಲ್ಲ ಅಂತ ಗುಡುಗಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಕೊರೊನಾ- ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿ ಸೋಂಕು
ತಿರಂಗ ರಾಷ್ಟ್ರೀಯ ಭಾವನೆಯನ್ನು ಮೂಡಿಸುತ್ತದೆ. ಎಲ್ಲಡೆ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತದೆ. ಆರ್‌ಎಸ್‍ಎಸ್ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನಿಂದ ಪಾಠ ಕಲಿಯುವಂತದ್ದು ಏನೂ ಇಲ್ಲ. ನಮ್ಮನ್ನೆಲ್ಲಾ ಆರ್‌ಎಸ್‍ಎಸ್ ಶಾಖೆಯಲ್ಲೇ ಸಂಸ್ಕಾರ ತುಂಬಿ ದೇಶ ಸೇವೆಗೆ ಬಿಟ್ಟಿದ್ದಾರೆ ಎಂದಿದ್ದಾರೆ.
ಮಂಗಳೂರು ಗಲಾಟೆ ಪ್ರಕರಣ ಸಂಬಂಧ ತಪ್ಪಿಸಿಕೊಂಡಿದ್ದ ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆದಿದೆ. ಇದರ ಹಿಂದಿನ ಮತಾಂಧ ಸಂಘಟನೆಗಳನ್ನು ಎನ್‍ಐಎ ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಅಪ್ಪಚ್ಚು ರಂಜನ್
ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಅಂತ ಈಗಾಗಲೇ ಹೇಳಿಯಾಗಿದೆ. ಕಂದಾಯ ಇಲಾಖೆ ಏನು ಹೇಳುತ್ತದೆ, ಅದಕ್ಕೆ ನಮ್ಮ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತದೆ ಎಂದರು. ನಂತರ ಈ ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಶಪಥ ಮಾಡಿದ್ದಾರೆ. ರಾಜ್ಯ ತಿರುಗಾಟಕ್ಕೆ ಓಡಾಡೋಣ ಅಂತ ಹೇಳಿದ್ದಾರೆ ನಾವು ಸಿದ್ದರಿದ್ದೇವೆ ಎಂದಿದ್ದಾರೆ.