ಬೆಳಗಾವಿ: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಯಾವುದೇ ರೀತಿಯ ಒತ್ತಡಗಳು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರು ಡ್ರಗ್ಸ್ ಕೇಸ್‍ನಲ್ಲಿ ಭಾಗವಹಿಸಿದ್ದರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
Advertisement
ನಟಿ, ನಿರೂಪಕಿ ಅನುಶ್ರೀ ಅವರ ಮೇಲೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‍ನಲ್ಲಿ ಸಾಫ್ಟ್ ಕಾರ್ನರ್ ತೋರಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹದರಲ್ಲಿ ಯಾರು ಕೂಡ ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್‍ನಲ್ಲಿ ಬಹಳ ಕಠಿಣವಾದ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮುಂದೆಯು ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?
Advertisement
Advertisement
ಯಾವುದೇ ಕಾರಣಕ್ಕೂ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ. ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸರು ಕೇಳಿಬಂದಿರುವ ವಿಚಾರಕ್ಕೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ