ತುಮಕೂರು: ಕಾಂಗ್ರೆಸ್‍ನವರ ಕಾಲದಲ್ಲಿ ಮೃತಪಟ್ಟವರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರಾ?. ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತದೆ. ಹರ್ಷ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತಿದ್ದೇವೆ ಎಂದು ಶಿವಮೊಗ್ಗ ಹರ್ಷ ಕುಟುಂಬಕ್ಕೆ ಟಿಕೆಟ್ ಕೊಡುವ ವಿಚಾರ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಕಿಂತ ಮುಖ್ಯವಾಗಿ ಹರ್ಷನ ತಾಯಿ ನನಗೆ ಒಂದು ಮಾತು ಹೇಳಿದ್ದಾರೆ. ಮಗನ ಪ್ರಾಣ ತಂದುಕೊಡುವಂತೆ ಕೇಳಲ್ಲ. ಅವನ ಸಾವು ಅರ್ಥ ಹೀನ ಆಗಬಾರದು, ವ್ಯರ್ಥ ಆಗಬಾರದು. ಅವನು ಒಂದು ಉದ್ದೇಶಕೋಸ್ಕರ ಸತ್ತಿದ್ದಾನೆ. ಅದಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ್ದಾರೆ. ಅದನ್ನ ನಾವು ಮಾಡುತ್ತಾ ಇದ್ದೇವೆ ಎಂದರು.
Advertisement
Advertisement
ಇದೇ ವೇಳೆ ಉಕ್ರೇನ್ ನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳಿಗೆ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ
Advertisement
ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯದ ಬಗ್ಗೆ ಸಂಬಂಧಿಸಿ ಮಾತನಾಡಿದ ಸಚಿವರು, ಔರಾಧಕರ್ ವರದಿ ಅನುಷ್ಠಾನ ಬಜೆಟ್ ನಲ್ಲಿ ಬರಬೇಕಂತಿಲ್ಲ. ಆವತ್ತಿನ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಹಿರಿಯ ಪೊಲೀಸರಿಗೆ- ಅಧಿಕಾರಿಗಳಿಗೆ ಇದರಿಂದ ತೊಂದರೆಯಾಗಿದೆ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.