ಬೆಂಗಳೂರು: ನಾನು ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ಕ್ಷಮೆಯಾಚಿಸಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂದ ಬೇಜವಾಬ್ದಾರಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಅವಳನ್ನು ನನ್ನ ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಹೀಗಾಗಿ ನಾನು ಆತಂಕದಿಂದ ಆ ಮಾತನ್ನು ಹೇಳಿದ್ದೇನೆ. ನಾನು ಆ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ. ಅಲ್ಲದೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
ಕಾಂಗ್ರೆಸ್ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಇಂತಹ ಒಂದು ಗಂಭೀರವಾದ ಪ್ರಕರಣ ನಡೆದಿದೆ. ಇದರ ಬಗ್ಗೆ ನಾನು ಹೆಚ್ಚು ಹೇಳಲು ಇಷ್ಟ ಪಡುವುದಿಲ್ಲ. ಯಾಕಂದ್ರೆ ಗೃಹ ಇಲಾಖೆ ನಿಭಾಯಿಸಿದ ಅನೇಕ ಹಿರಿಯರು ಇದ್ದಾರೆ. ಹೀಗಾಗಿ ಅವರು ಕೂಡ ಸ್ಪಷ್ಟಪಡಿಸಬಹುದು ಎಂದು ನಾನು ಅಂದುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು 376 ಸೆಕ್ಷನ್ ಕೇಸ್ ಹಾಕಿ ಬಂಧಿಸಲಿ: ಡಿ.ಕೆ ಶಿವಕುಮಾರ್
ಮೈಸೂರು ಗ್ಯಾಂಗ್ ರೇಪ್ ಪ್ರಕರಣದಿಂದಾಗಿ ರಾಜ್ಯದ ಮಾನ ಹರಾಜಾಗ್ತಿದೆ. ಆದರೆ ಮತಿಗೇಡಿ ರಾಜಕಾರಣಿಗಳು ಮತಿಹೀನರಾಗಿ ಮಾತಾಡ್ತಿದ್ದಾರೆ. ಅದರಲ್ಲೂ ಬಿಜೆಪಿ ಸಚಿವರು ಗಂಭೀರತೆ ಇಲ್ಲದಂತೆ ಮಾತಾಡ್ತಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಜ್ಞಾನಿಯ ರೀತಿ ಮಾತನಾಡಿದ್ದಾರೆ. ಕಾಡಿ-ಬೇಡಿ, ಒತ್ತಡ-ಬೆದರಿಕೆ ಹಾಕಿ ಸಚಿವಗಿರೋ ಜ್ಞಾನೇಂದ್ರ ಅವರಿಗೆ ಸಿಕ್ಕಿರೋ ಗೃಹ ಇಲಾಖೆ ಬಗ್ಗೆ ಜ್ಞಾನವೇ ಇಲ್ಲದಂತೆ ವರ್ತಿಸ್ತಿದ್ದಾರೆ. ಗೃಹ ಸಚಿವರಾದ ಮೇಲೆ ಪೊಲೀಸರು ನಿದ್ದೆ ಮಾಡೋಕೇ ಬಿಡ್ತಿಲ್ಲ ಅಂತ ಹೇಳಿ ವಿವಾದಕ್ಕೀಡಾಗಿದ್ದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಯತ್ನಾಳ್
ಮೈಸೂರು ಗ್ಯಾಂಗ್‍ರೇಪ್ ವಿಚಾರವಾಗಿ ಪರಪ್ಪನ ಅಗ್ರಹಾರದ ಬಳಿ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ರೇಪ್ ಆಗಿರೋದು ಮೈಸೂರಲ್ಲ, ಆದರೆ ಕಾಂಗ್ರೆಸ್‍ನವರು ನನ್ನ, ಗೃಹ ಸಚಿವರನ್ನ ರೇಪ್ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಘಟನೆ ಅಮಾನುಷ. ಯಾರೂ ರಾಜಕೀಯ ಮಾಡಬಾರದು. ಜೊತೆಗೆ ಯುವಕ-ಯುವತಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಹೋಗಬಾರದಿತ್ತು. ಹೋಗಬೇಡಿ ಅಂತ ತಡೆಯೋದಕ್ಕೂ ಆಗೋದಿಲ್ಲ. ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ ಎಂದು ಹೇಳಿದ್ದರು. ಗೃಹ ಸಚಿವರ ಹೇಳಿಕೆಗೆ ಸಿಎಂ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಸಿಎಂ ಸೂಚಿಸಿದ್ದ ಬಳಿಕ ಅರಗ ಜ್ಞಾನೇಂದ್ರ ಕ್ಷಮೆ ಯಾಚಿಸಿದ್ದಾರೆ.