ಪೀನಟ್ ಬಟರ್ ಅನ್ನು ನಮ್ಮ ದಿನನಿತ್ಯದ ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯ ಚನ್ನಾಗಿರುತ್ತದೆ. ಪೀನಟ್ ಬಟರ್ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಿ ಒಳ್ಳೆಯ ಕೊಲೆಸ್ಟ್ರಾಲ್ ತುಂಬುವಲ್ಲಿ ಸಹಕಾರಿಯಾಗಿದೆ. ಅಲ್ಲದೇ ಒಂದು ವರ್ಷದ ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇದನ್ನು ಸೇವಿಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲರೂ ಅಂಗಡಿಯಲ್ಲಿ ದೊರೆಯುವ ಪೀನಟ್ ಬಟರ್ ಅನ್ನು ತಂದು ಬಳಸುತ್ತಾರೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲಿಯೇ ಪೀನಟ್ ಬಟರ್ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್
Advertisement
ಬೇಕಾಗುವ ಸಾಮಗ್ರಿಗಳು:
ಶೇಂಗಾ ಬೀಜ – 1 ಕಪ್
ಜೇನುತುಪ್ಪ – 1 ಚಮಚ
ಉಪ್ಪು – ಒಂದು ಚಿಟಿಕೆ
ಕಡಲೆಕಾಯಿ ಎಣ್ಣೆ – 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಶೇಂಗಾ ಬೀಜ ಹಾಕಿಕೊಂಡು ಕೆಂಪಗಾಗುವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಾಗಗಲು ಬಿಡಿ.
* ಈಗ ಹುರಿದ ಶೇಂಗಾ ಬೀಜವನ್ನು ಒಂದು ಟವಲ್ ಅಥವಾ ಬಟ್ಟೆಯ ಮೇಲೆ ಹಾಕಿಕೊಂಡು ಅದರ ಸಿಪ್ಪೆ ಹೋಗುವವರೆಗೆ ಚನ್ನಾಗಿ ಉಜ್ಜಿಕೊಂಡು ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ.
* ಬಳಿಕ ಒಂದು ಮಿಕ್ಸಿ ಜಾರಿಗೆ ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
* ನಂತರ ಇದಕ್ಕೆ 1 ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ ಒಮದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಿ. ಬಳಿಕ ಮತ್ತೊಂದು ಬಾರಿ ರುಬ್ಬಿಕೊಳ್ಳಿ.
* ಈಗ ಈ ಮಿಶ್ರಣಕ್ಕೆ ಒಂದು ಚಮಚ ಕಡಲೆಕಾಯಿ ಎಣ್ಣೆ ಹಾಕಿಕೊಳ್ಳಿ. ಬಳಿಕ ಇನ್ನೊಂದು ಬಾರಿ ರುಬ್ಬಿಕೊಳ್ಳಿ.
* ಮಿಕ್ಸಿ ಜಾರಿನಲ್ಲಿದ್ದ ಮಿಶ್ರಣವನ್ನು ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ. ಈ ಪೀನಟ್ ಬಟರ್ ಅನ್ನು ಚಪಾತಿ, ಬ್ರೆಡ್ ಅಥವಾ ನಿಮಗಿಷ್ಟವಾದ ಆಹಾರದೊಂದಿಗೆ ಸೇವಿಸಬಹುದು. ಇದನ್ನೂ ಓದಿ: ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ
Advertisement