ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಹಾವಳಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸದ್ಯ ಭಾರತ ಸ್ಟೇಜ್ 2ನಲ್ಲಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಸೋಂಕಿನ ಭೀಕರತೆಯನ್ನು ಎದುರಿಸಿಬೇಕಾಗುತ್ತೆ. ಯಾಕೆಂದರೆ ಈವರೆಗೂ ಈ ಸೋಂಕಿಗೆ ಔಷಧಿ ಲಭ್ಯವಿಲ್ಲ. ಔಷಧಿ ಕಂಡುಹಿಡಿಯುವಲ್ಲಿ ಸಂಶೋದಕರು ನಿರತರಾಗಿದ್ದಾರೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.
Advertisement
ಶೀತ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆಗಳಂತಹ ಯಾವುದೇ ಲಕ್ಷಣಗಳು ಗೋಚರಿಸದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆ ಮದ್ದುಗಳು ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ವೃದ್ಧಿಸಿಕೊಳ್ಳಬಹುದು.
Advertisement
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿಗಳು ಸೇರಿಕೊಂಡರೆ ಒಳ್ಳೆಯದು. ಹಣ್ಣು, ತರಕಾರಿಗಳನ್ನು ಸೇವಿಸಿದರೆ ಅದರಲ್ಲಿರುವ ಹೆಚ್ಚಿನ ಪೌಷ್ಟಿಕ ಸತ್ವಗಳು ದೇಹ ಸೇರಿ, ಆರೋಗ್ಯ ರಕ್ಷಣೆ ಮಾಡುತ್ತದೆ. ಅದರಲ್ಲೂ ಹಣ್ಣು ಮತ್ತು ತರಕಾರಿಗಳು ಎರಡನ್ನೂ ಮಿಶ್ರಣ ಮಾಡಿ ತಯಾರಿಸುವ ಪಾನೀಯಗಳಲ್ಲಿ ಪೋಷಕಾಂಶಗಳು ಯಥೇಚ್ಛವಾಗಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಜ್ಯೂಸ್‍ಗಳನ್ನು ಮಾಡೋದು ಹೇಗೆ? ಅದರಿಂದ ಏನು ಲಾಭ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
Advertisement
Advertisement
ಯಾವ ಜ್ಯೂಸ್ ಕುಡಿದರೆ ಏನು ಲಾಭ?
1. ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್
ಕ್ಯಾರೆಟ್‍ನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಹೆಚ್ಚಿದ್ದು, ಉಸಿರಾಟದ ವ್ಯವಸ್ಥೆಯ ಉತ್ತಮಗೊಳಿಸುತ್ತದೆ. ಸೇಬು ಹಣ್ಣುಗಳಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ಪ್ರಮುಖ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಕ್ಷಣೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಇರುವ ಪೌಷ್ಟಿಕ ಸತ್ವಗಳು ಯಾವುದೇ ಬಗೆಯಲ್ಲಿ ವೈರಾಣುಗಳ ಸೋಂಕನ್ನು ತಡೆಯುವಲ್ಲಿ ಸಹಾಯಕವಾಗಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳು ಸಿಗುತ್ತದೆ.
ಜ್ಯೂಸ್ ಮಾಡುವ ವಿಧಾನ:
ಮೊದಲು ಕತ್ತರಿಸಿದ 1 ಕ್ಯಾರೆಟ್, 1 ಸೇಬು ಹಣ್ಣನ್ನು ಚೆನ್ನಾಗಿ ತೊಳೆದು, 1 ಕಿತ್ತಳೆ ಹಣ್ಣನ್ನು ಸುಲಿದು ಸೊಳೆಗಳನ್ನು ಒಂದು ಮಿಕ್ಸರ್ ಜಾರ್‍ನಲ್ಲಿ ಹಾಕಿ ರುಬ್ಬಿಕೊಳ್ಳಿ.
ಬಳಿಕ ಅದರಿಂದ ರಸವನ್ನು ತೆಗೆದು ಲೋಟದಲ್ಲಿ ಹಾಕಿಕೊಂಡು ಕುಡಿಯಿರಿ ಅಥವಾ ರುಬ್ಬಿಕೊಂಡ ಮಿಶ್ರಣವನ್ನು ಹಾಗೆಯೇ ಗಟ್ಟಿಯಾಗಿ ಕೂಡ ಸೇವಿಸಬಹುದು. ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಸೇವಿಸೋದು ಉತ್ತಮವಾಗಿದ್ದು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
2. ನಿಂಬೆ ಹಣ್ಣು, ಶುಂಠಿ ಮತ್ತು ಜೇನು ತುಪ್ಪ ಪಾನೀಯ
ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಹೆಚ್ಚಾಗಿ ಇರುತ್ತದೆ. ಜೇನು ತುಪ್ಪದ ಜೊತೆ ಶುಂಠಿ ಮತ್ತು ನಿಂಬೆ ಹಣ್ಣಿನ ರಸ ಸೇರಿದರೆ ದೇಹದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಇಲ್ಲವಾಗಿಸುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಅಂಶವಿದ್ದು, ಇದು ಜೀರ್ಣಾಂಗದ ವ್ಯವಸ್ಥೆ ಉತ್ತಮಗೊಳಿಸಿ ಅಜೀರ್ಣತೆ ದೂರಮಾಡಲು ಸಹಕಾರಿಯಾಗಿದೆ. ಶುಂಠಿಯಲ್ಲಿ ಆಂಟಿ-ಇನ್ಫಾಮೇಟರಿ ಗುಣವಿದ್ದು ಇದು ಆರೋಗ್ಯಕ್ಕೆ ಒಳ್ಳೆಯದು.
ಶೀತಾ ಮತ್ತು ಜ್ವರದ ಲಕ್ಷಣಗಳನ್ನು ದೂರ ಮಾಡಲು ನಿಂಬೆ ಹಣ್ಣು, ಶುಂಠಿ, ಜೇನು ತುಪ್ಪ ಸಹಾಯಕವಾಗಿದ್ದು, ಇವುಗಳನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಬೆಳಗಿನ ಅಸ್ವಸ್ಥತೆಯನ್ನು, ವಾಕರಿಕೆ ಮತ್ತು ವಾಂತಿಯ ಸಮಸ್ಯೆಯನ್ನು, ಮಾಂಸ ಖಂಡಗಳ ನೋವುಗಳನ್ನು ನಿವಾರಣೆ ಆಗುತ್ತದೆ. ಜೇನು ತುಪ್ಪ ದೇಹದ ತೂಕ ಕಡಿಮೆ ಮಾಡುವಲ್ಲಿ, ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು ಮತ್ತು ಕೆಮ್ಮಿನ ಸಮಸ್ಯೆಯನ್ನು ದೂರ ಮಾಡುವಲ್ಲಿ ಉಪಯುಕ್ತವಾಗಿದೆ.
ಜ್ಯೂಸ್ ತಯಾರು ಮಾಡುವ ವಿಧಾನ:
ಒಂದು ಗ್ಲಾಸ್ ಕುದಿಯುವ ನೀರಿನಲ್ಲಿ ಸ್ವಲ್ಪ ತುರಿದ ಶುಂಠಿ, 1 ಚಿಟಿಕೆ ಅರಿಶಿನ, 2ರಿಂದ 3 ಟೇಬಲ್ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಕಲಿಸಿ. ಬಳಿಕ ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು, ಆ ಬಳಿಕ ಒಂದು ಟೇಬಲ್ ಚಮಚದಷ್ಟು ಜೇನು ತುಪ್ಪವನ್ನು ನಿಂಬೆ ರಸದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ತಯಾರಿಸಿದ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
4. ಶುಂಠಿ, ಅರಿಶಿನ ಮತ್ತು ಕ್ಯಾರೆಟ್ ಜ್ಯೂಸ್
ಅರಿಶಿನದಲ್ಲಿ ಆಂಟಿ-ಆಕ್ಸಿಡೆಂಟ್ ಅಂಶವಿರುತ್ತದೆ, ಶುಂಠಿ ಒಣ ಕೆಮ್ಮನ್ನು ತಡೆಯಲು ಸಹಾಯಕವಾಗಿದ್ದು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಹೆಚ್ಚಾಗಿದ್ದು, ರೋಗನಿರೋಧಕ ವರ್ಧಕವಾಗಿದೆ.
ಜ್ಯೂಸ್ ಮಾಡುವ ವಿಧಾನ:
ಮೊದಲು ಶುಂಠಿ, ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆಯಿರಿ. ಬಳಿಕ 1 ಅಥವಾ 2 ಕ್ಯಾರೆಟ್‍ಗಳನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ, ಬಳಿಕ ರಸವನ್ನು ತೆಗೆಯಿರಿ. ಈ ಕ್ಯಾರೆಟ್ ರಸಕ್ಕೆ ನಿಂಬೆ ಹಾಗೂ ಶುಂಠಿ ರಸವನ್ನು ಸೇರಿಸಿ ಜೊತೆಗೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಜ್ಯೂಸ್ ಮಾಡಿ. ಅದಕ್ಕೆ ಒಂದು ಚಿಟಿಕೆ ಕರಿಮೆಣಸು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.