ನಟ ಡಾರ್ಲಿಂಗ್ ಪ್ರಭಾಸ್ ಜೊತೆ ಸಿನಿಮಾ ಮಾಡೋದಾಗಿ ಘೋಷಿಸಿದ ಬೆನ್ನಲ್ಲೇ ಹೊಸ ಚಿತ್ರವೊಂದನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ‘ಮಹಾವತಾರ ನರಸಿಂಹ’ (Mahavatar Narasimha) ಚಿತ್ರದ ಮೋಷನ್ ಪೋಸ್ಟರ್ ಅನ್ನು ಹೊಂಬಾಳೆ ಸಂಸ್ಥೆ ರಿವೀಲ್ ಮಾಡಿದೆ. ಇದನ್ನೂ ಓದಿ:ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ
ಪ್ರಭಾಸ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ಘೋಷಿಸಿದ ಬೆನ್ನಲ್ಲೇ ಹೊಸ ಸಿನಿಮಾದ ಪೋಸ್ಟರ್ ಅನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಹಂಚಿಕೊಂಡಿದೆ. ಪೋಸ್ಟರ್‌ನಲ್ಲಿ ಉಗ್ರಂ ನರಸಿಂಹನ ಅವತಾರವಿರುವ ಮೋಷನ್ ಪೋಸ್ಟರ್ ಅನ್ನು ತಂಡ ಘೋಷಿಸಿದೆ. ಕೈ ಮತ್ತು ಮೈ ತುಂಬಾ ಆಭರಣಗಳು ಇವೆ. ನಂಬಿಕೆಗೆ ಸವಾಲು ಬಂದಾಗ, ಅವನು ಕಾಣಿಸಿಕೊಳ್ಳುತ್ತಾನೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ದೇವರು ವಿಷ್ಣುವಿನ ಅವತಾರ ಎಂದು ಬರೆದಿದ್ದಾರೆ.
View this post on Instagram
ಈ ಚಿತ್ರ ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು, ಮಲಯಾಳಂನಲ್ಲಿ ಮೂಡಿ ಬರಲಿದೆ. ಈ ಚಿತ್ರಕ್ಕೆ ಅಶ್ವಿನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ಜೊತೆ ಕ್ಲೀನ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ.