CinemaKarnatakaLatestMain PostSandalwoodSouth cinema

ಹೊಂಬಾಳೆ ಫಿಲ್ಮ್ಸ್- ಮಲಯಾಳಂ ನಿರ್ದೇಶಕ ಪೃಥ್ವಿರಾಜ್ ಅವರನ್ನ ಆಯ್ಕೆ ಮಾಡಿಕೊಂಡಿದ್ಹೇಕೆ?

ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ `ಟೈಸನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಇಡ್ತಿದ್ದಾರೆ. `ಟೈಸನ್’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, `ಕೆಜಿಎಫ್ 2′ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ಸಾಥ್ ನೀಡುತ್ತಿದೆ. ಆ್ಯಕ್ಷನ್ ಥ್ರಿಲರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ನಟ ಕಮ್ ನಿರ್ದೇಶಕ ಪೃಥ್ವಿರಾಜ್ ಸಜ್ಜಾಗಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ನಟನೆಯ ಜೊತೆ ನಿರ್ದೇಶನ ಮಾಡುತ್ತಿರುವ `ಟೈಸನ್’ ಸಿನಿಮಾ ಆ್ಯಕ್ಷನ್ ಪ್ಯಾಕ್ಡ್ ಸೋಷಿಯೋ ಥ್ರಿಲರ್ ಚಿತ್ರವಾಗಿದ್ದು, ವಿಭಿನ್ನ ಕಥೆ ಮತ್ತು ಪಾತ್ರದ ಮೂಲಕ ಕಮಾಲ್ ಮಾಡಲು ಸ್ಯಾಂಡಲ್‌ವುಡ್ ಎಂಟ್ರಿ ಕೊಡ್ತಿದ್ದಾರೆ. ಮುರಳಿ ಗೋಪಿ ಚಿತ್ರಕಥೆ ಬರೆದಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.

ಇನ್ನು `ಕೆಜಿಎಫ್ 2′ ಸಿನಿಮಾವನ್ನು ಮಲಯಾಳಂನಲ್ಲಿ ಪ್ರೇಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರು ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ `ಕೆಜಿಎಫ್ 2′ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿ ಸಾಥ್ ನೀಡಿದ್ದರು. ಹೀಗೆ ಹೊಂಬಾಳೆ ಸಂಸ್ಥೆಯ ಜತೆ ಒಳ್ಳೆಯ ಬಾಂಧವ್ಯವಿರುವ ಕಾರಣ ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪೃಥ್ವಿರಾಜ್ ಆ್ಯಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

ಚಿತ್ರ ತೆರೆಗೆ ಬರೋದಕ್ಕೂ ಮುಂಚೆ `ಟೈಸನ್’ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ರಿಲೀಸ್ ಬಳಿಕ ಯಾವ ರೀತಿ ಸೌಂಡ್ ಮಾಡುತ್ತೆ ಕಾದುನೋಡಬೇಕಿದೆ.

Leave a Reply

Your email address will not be published.

Back to top button