CinemaKarnatakaLatestLeading NewsMain PostSandalwoodSouth cinema

ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

ಲೂಸಿಯಾ ಖ್ಯಾತಿಯ ಪವನ್ ಕುಮಾರ್ (Pawan Kumar) ಮತ್ತು ಮಲಯಾಳಂ ಹೆಸರಾಂತ ನಟ ಫಹಾದ್ ಫಾಸಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಮೊದಲ ಬಾರಿಗೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಅದೀಗ ನಿಜವಾಗಿದೆ. ಈ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ಕೊಡಲಿದ್ದೇವೆ ಎಂದು ಹೊಂಬಾಳೆ ಹೇಳಿಕೊಂಡಿತ್ತು.

ಅಂದುಕೊಂಡಂತೆ ಆಗಿದ್ದರೆ, ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ದ್ವಿತ್ವ ಸಿನಿಮಾ ಆಗಬೇಕಿತ್ತು. ಪುನೀತ್ ಅವರ ಹಠಾತ್ ನಿಧನದಿಂದಾಗಿ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್ ಗೆ ಮಾಡಲಿದ್ದಾರಾ ಅಥವಾ ಬೇರೆ ಕಥೆಯನ್ನು ಪವನ್ ಆಯ್ಕೆ ಮಾಡಿಕೊಂಡಿದ್ದಾರಾ ಅವರೇ ಹೇಳಬೇಕು. ಒಟ್ಟಿನಲ್ಲಿ ಫಾಸಿಲ್ ಗಾಗಿ ಪವನ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಧೂಮ್ (Dhoom) ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

ಧೂಮ್ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

ಫಹಾದ್ ಫಾಸಿಲ್ (Fahadh Faasil) ನಾಯಕನಾಗಿ ನಟಿಸುತ್ತಿದ್ದರೆ, ಸೂರರೈ ಪೋಟ್ರು ನಾಯಕಿ ಅಪರ್ಣಾ ಬಾಲಮುರಳಿ (Aparna Balamurali) ಈ ಸಿನಿಮಾದ ನಾಯಕಿ. ಅಕ್ಟೋಬರ್ 9 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಫಹಾದ್ ಪ್ರತಿಭಾವಂತ ನಟ, ಪವನ್ ಕುಮಾರ್ ಹೊಸ ಬಗೆಯ ಯೋಚಿಸುವ ನಿರ್ದೇಶಕ. ಹಾಗಾಗಿ ಧೂಮಂ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ದುಪ್ಪಟ್ಟಾಗಿದೆ. ಹೊಂಬಾಳೆ ಫಿಲ್ಸ್ಮ್ ನಿಂದ ಈಗಾಗಲೇ ಸಲಾರ್, ಬಘೀರ್, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ರೆಡಿಯಾಗಿದ್ದು, ಈ ಸಿನಿಮಾ ಸಾಲಿಗೆ ಧೂಮ್ ಕೂಡ ಸೇರ್ಪಡೆಯಾಗಿದೆ.

Live Tv

Leave a Reply

Your email address will not be published. Required fields are marked *

Back to top button