ಲೂಸಿಯಾ ಪವನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಲಯಾಳಂ ‘ಧೂಮಂ’ ಸಿನಿಮಾ ಕೇವಲ ಎರಡೇ ಎರಡು ತಿಂಗಳಲ್ಲಿ ಚಿತ್ರೀಕರಣ ಮುಗಿಸಿದೆ. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ತಮ್ಮ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ ಎಂದು ಘೋಷಿಸಿದ್ದಾರೆ. ಈಗಾಗಲೇ ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಸಾಲಿಗೆ ಧೂಮಂ ಕೂಡ ಸೇರಿಕೊಂಡಿದೆ.
Advertisement
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್ ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ
Advertisement
Advertisement
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾ ಕೂಡ ಇನ್ನೇನು ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಶ್ರೀಮುರುಳಿ ನಟನೆಯ ಬಘೀರ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಯುವ ರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಇನ್ನಷ್ಟೇ ಶೂಟಿಂಗ್ ಶುರು ಮಾಡಬೇಕು. ಜೊತೆಗೆ ತಮಿಳು ಮತ್ತು ಹಿಂದಿಯಲ್ಲೂ ಸಿನಿಮಾ ಮಾಡುವುದಾಗಿ ಹೊಂಬಾಳೆ ಘೋಷಣೆ ಮಾಡಿದೆ.
Advertisement
ಐದು ವರ್ಷದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಂಡವಾಳವನ್ನು ಸಿನಿಮಾ ರಂಗದಲ್ಲಿ ಹೂಡುವುದಾಗಿ ಹೇಳಿರುವ ನಿರ್ಮಾಪಕ ವಿಜಯ ಕಿರಗಂದೂರು, ಈಗಾಗಲೇ ಹಲವು ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಕಾಂತಾರ 2 ಸಿನಿಮಾ ಮಾಡಲು ಯೋಜನೆ ಈಗಾಗಲೇ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 ಸಿನಿಮಾ ಕೂಡ ಶುರು ಮಾಡಲಿದ್ದಾರಂತೆ. ಅಲ್ಲದೇ, ಬಾಲಿವುಡ್ ನಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನುವುದು ಹೊಸ ವರ್ತಮಾನ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k