ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಕೇವಲ ಕನ್ನಡದಲ್ಲಿ ಸಿನಿಮಾ ಮಾಡಿ, ಬೇರೆ ಭಾಷೆಗಳಿಗೆ ಡಬ್ ಮಾಡಿ ಚಿತ್ರಗಳನ್ನು ರಿಲೀಸ್ ಮಾಡುತ್ತಿತ್ತು. ಆದರೆ, ಇದೀಗ ಆಯಾ ಭಾಷೆಯಲ್ಲೇ ಸಿನಿಮಾ ಮಾಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ತಯಾರಿಸುತ್ತಿದ್ದರೆ, ತಮಿಳಿನಲ್ಲಿ (Tamil) ಒಂದು, ತೆಲುಗಿನಲ್ಲಿ ಒಂದು ಹಾಗೂ ಮಲಯಾಳಂ ಭಾಷೆಯಲ್ಲಿ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿತ್ತು. ಅಲ್ಲದೇ, ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಯೋಜನೆಯನ್ನೂ ಅದು ಸಿದ್ಧ ಪಡಿಸಿದೆ. ಮೊನ್ನೆಯಷ್ಟೇ ಮಲಯಾಳಂ ಸಿನಿಮಾ ಮುಗಿಸಿರುವುದಾಗಿ ಪವನ್ ಕುಮಾರ್ ಹೇಳಿಕೊಂಡಿದ್ದರು. ಇದೀಗ ತಮಿಳಿನಲ್ಲೂ ಶೂಟಿಂಗ್ ಮುಗಿಸಲಾಗಿದೆ.
ತೆಲುಗಿನಲ್ಲಿ ಸಲಾರ್ ಸಿನಿಮಾ ಒಂದೂವರೆ ವರ್ಷದಿಂದ ಚಿತ್ರೀಕರಣ ನಡೆಯುತ್ತಿದ್ದರೂ, ತಮಿಳಿನಲ್ಲಿ ಮಾತ್ರ ವೇಗದಿಂದ ಚಿತ್ರೀಕರಣ ಮುಗಿಸಿದ್ದಾರೆ ಸುಮನ್ ಕುಮಾರ್ (Suman Kumar) . ರಘುತಾತ (Raghutatha) ಹೆಸರಿನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthy Suresh) ಈ ಸಿನಿಮಾದ ನಾಯಕಿ. ಇದು ಮಹಿಳಾ ಪ್ರಧಾನ ಸಿನಿಮಾ ಎನ್ನುವುದು ವಿಶೇಷ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ
ವೆಬ್ ಸೀರಿಸ್ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕರು, ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗಂಭೀರ ಸಮಸ್ಯೆಯೊಂದರ ಸುತ್ತ ಹೆಣೆದಿರುವ ಕಥೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದ ಶೂಟಿಂಗ್ ಮುಗಿಸಿ, ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ.