ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ (Raj B Shetty) ನಟನೆಯ ’45’ ಸಿನಿಮಾಗೆ ಮೊದಲ ಬಾರಿ ಅರ್ಜುನ್ ಜನ್ಯ (Arjun Janya) ನಿರ್ದೇಶನ ಮಾಡ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು ಕೈಜೋಡಿಸಿದ್ದಾರೆ. ಇದನ್ನೂ ಓದಿ:ಗೀತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ಧೀರೆನ್ ಹೊಸ ಸಿನಿಮಾ
ಹಾಲಿವುಡ್‌ನ ಹಲವು ಸಿನಿಮಾಗಳಿಗೆ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಮಾಡಿರುವ ಮಾರ್ಜ್ ಅನ್ನು ಸಂಪರ್ಕ ಮಾಡಿರುವ ಅರ್ಜುನ್ ಜನ್ಯ. ’45’ ಸಿನಿಮಾದ ವಿಎಫ್‌ಎಕ್ಸ್ ಕೆಲಸವನ್ನು ಸಂಸ್ಥೆಯ ನುರಿತ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರು ಮಾಡಲಿದ್ದಾರೆ.
ಹಾಲಿವುಡ್‌ನ ಜನಪ್ರಿಯ ಸಿನಿಮಾಗಳಾದ ‘ಆಂಟ್‌ಮ್ಯಾನ್’, ‘ವಾಂಡಾ ವಿಷನ್’, ‘ಮೂನ್ ಲೈಟ್’, ‘ವೆಡ್‌ನಸ್ ಡೇ’, ‘ಸ್ಟೇಂಜರ್ ಥಿಂಗ್ಸ್ 4’, ‘ಫ್ಯಾಂಟಸಿ ಐಲೆಂಡ್’, ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಇನ್ನೂ ಹಲವಾರು ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸರಣಿಗಳಿಗೆ ಈ ಸಂಸ್ಥೆ ಕೆಲಸ ಮಾಡಿದೆ.