ಕನ್ನಡದ ‘ದಿ ವಿಲನ್’ (The Villain Kannada) ನಟಿ ಆ್ಯಮಿ ಜಾಕ್ಸನ್ (Amy Jackson) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರಿನ ಸಮೇತ ಆ್ಯಮಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್’ ನಟಿ ಮೇಘನಾ
ಮುದ್ದಾದ ಗಂಡು ಮಗುವಿಗೆ (Baby Boy) ಆ್ಯಮಿ ಮತ್ತು ಎಡ್ ವೆಸ್ಟ್ವಿಕ್ ದಂಪತಿ ಪೋಷಕರಾದ ಖುಷಿಯಲ್ಲಿದ್ದಾರೆ. ಇದೀಗ ಮಗುವನ್ನು ಹಿಡಿದುಕೊಂಡು ಪತಿಯ ಜೊತೆ ನಟಿ ಪೋಸ್ ಮಾಡಿರುವ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ಮಗನಿಗೆ ‘ಆಸ್ಕರ್ ಅಲೆಕ್ಸಾಂಡರ್ ವೆಸ್ಟ್ವಿಕ್’ (Oscar Alexandar Westwick) ಎಂದು ಹೆಸರಿಡಲಾಗಿದೆ.
View this post on Instagram
ಅಂದಹಾಗೆ, ಹಾಲಿವುಡ್ ನಟ ಎಡ್ ವೆಸ್ಟ್ವಿಕ್ ಜೊತೆ ಆ್ಯಮಿ 2022ರಿಂದ ಡೇಟಿಂಗ್‌ನಲ್ಲಿದ್ದರು. ಆ ನಂತರ ಕಳೆದ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.